Connect with us

Bengaluru City

ವಿಡಿಯೋ ಮಾಡಿ ಆಟೋ ಡ್ರೈವರ್ ಆತ್ಮಹತ್ಯೆ

Published

on

ಬೆಂಗಳೂರು: ಆಟೋ ಡ್ರೈವರೊಬ್ಬರು ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.

ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೆಂಕಟೇಶ್ ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸುಬೇದಾರ ಪಾಳ್ಯದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ತನ್ನ ಪತಿಗೆ ಡಿವೋರ್ಸ್ ಕೊಟ್ಟ ಬಳಿಕ ಯಶೋದ ಎಂಬ ಮಹಿಳೆ ಹಲವು ವರ್ಷಗಳಿಂದ ವೆಂಕಟೇಶ್ ಇರೋ ಏರಿಯಾದಲ್ಲೇ ವಾಸವಾಗಿದ್ದರು. ಇತ್ತ ಸಾಲದಿಂದ ಮನೆ ಮಠ ತೊರೆದಿದ್ದ ವೆಂಕಟೇಶ್ ಗೆ ಯಶೋದಾರ ಪರಿಚಯವಾಗಿತ್ತು. ವೆಂಕಟೇಶ್, ಯಶೋದ ಬಳಿಯೂ ಕೂಡ ಸಾಲ ಮಾಡಿದ್ದರು. ಜೊತೆಗೆ ದಿನವಿಡೀ ಮದ್ಯ ಸೇವಿಸಿ ವೆಂಕಟೇಶ್, ಯಶೋದ ಮನೆಗೆ ಹೋಗುತ್ತಿದ್ದರು. ಇದೇ ವಿಚಾರವಾಗಿ ಯಶೋದ ಗುರುವಾರ ರಾತ್ರಿ ವೆಂಕಟೇಶ್‍ಗೆ ಕ್ಲಾಸ್ ತೆಗೆದುಕೊಂಡಿದ್ದರು. ಶುಕ್ರವಾರ ಬೆಳಗ್ಗೆ ವೆಂಕಟೇಶ್, ವಿಡಿಯೋ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ನನ್ನ ಸಾವಿಗೆ ಯಶೋದ ಆಗಲಿ ಆಕೆಯ ಮಗಳಾಗಲಿ ಕಾರಣ ಅಲ್ಲ. ನನ್ನ ಸಾವಿಗೆ ನಾನೇ ಕಾರಣ. ನಾನು ಯಶೋದ ಬಳಿಯೂ ಸಾಲ ಮಾಡಿಕೊಂಡಿದ್ದೇನೆ. ನನ್ನ ಆಟೋ ಮಾರಿ ಬಂದ ಹಣವನ್ನು ಯಶೋದಾಗೆ ನೀಡಿ. ಮುಂದಿನ ಜನ್ಮ ಇದ್ರೆ ಯಶೋದ ಅವರೇ ನನ್ನ ಹೆಂಡತಿಯಾಗಿ ಬರಲಿ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಸಾಲಬಾಧೆಗೆ ಹೆದರಿ ಆಟೋಡ್ರೈವರ್ ವೆಂಕಟೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.