Thursday, 18th July 2019

4 hours ago

ರಾತ್ರಿ ದಿಢೀರ್ ಹೈಡ್ರಾಮಾ – ರೆಸಾರ್ಟಿನಲ್ಲಿದ್ದ ಕೈ ಶಾಸಕ ಶ್ರೀಮಂತ ಪಾಟೀಲ್ ನಾಪತ್ತೆ

ಬೆಂಗಳೂರು: ಇಂದು ವಿಶ್ವಾಸಮತದ ಹಿನ್ನೆಲೆಯಲ್ಲಿ ರಾತ್ರಿಯೂ ಭಾರೀ ಹೈಡ್ರಾಮಾ ನಡೆದಿದೆ. ಇಷ್ಟು ದಿನ ಸೈಲೆಂಟಾಗಿದ್ದ ರಮೇಶ್ ಜಾರಕಿಹೊಳಿ ಆಪ್ತ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಕಳೆದ ರಾತ್ರಿ ದಿಢೀರ್ ಕಾಂಗ್ರೆಸ್ ಶಾಸಕರು ತಂಗಿರುವ ದೇವನಹಳ್ಳಿಯ ಪ್ರಕೃತಿ ರೆಸಾರ್ಟಿನಿಂದ ನಾಪತ್ತೆಯಾಗಿದ್ದಾರೆ. ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಕೂಡ ರೆಸಾರ್ಟಿನಿಂದ ಹೊರಗೆ ಹೋಗಲು ಯತ್ನಿಸಿದ್ದರು. ಆದರೆ ಕಾಂಗ್ರೆಸ್‍ನ ಕಾರ್ಯಕರ್ತರು ಅವಕಾಶ ಕೊಡಲಿಲ್ಲ. ಕಾರಿನ ಮುಂದೆ ಹೋಗಿ ಕುಳಿತುಬಿಟ್ಟಿದ್ದಾರೆ. ಕೊನೆಗೆ ಬೇರೆ ಗತಿ ಇಲ್ಲದೇ ನಾರಾಯಣ ಸ್ವಾಮಿ ಮತ್ತೆ ರೆಸಾರ್ಟ್ ಸೇರಿಕೊಂಡಿದ್ದಾರೆ. ಶಿಡ್ಲಘಟ್ಟ […]

4 hours ago

ಉದ್ಯಮಿಯ ಕೊಲೆಗೆ ಸುಪಾರಿ ಕೊಟ್ಟಿದ್ದ ಕೈ ಮುಖಂಡ ಅರೆಸ್ಟ್

ಶಿವಮೊಗ್ಗ: ಉದ್ಯಮಿಯ ಕೊಲೆಗೆ ಸುಪಾರಿ ಕೊಟ್ಟಿದ್ದ ಕಾಂಗ್ರೆಸ್ ಮುಖಂಡನ ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷ ಕಲೀಂವುಲ್ಲಾ ಬಂಧಿತ ಆರೋಪಿ. ಈತ ಕಾಂಗ್ರೆಸ್ ಸೇರುವ ಮುನ್ನ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿದ್ದನು. ಉದ್ಯಮಿ ಹಬೀಬ್ ಎಂಬವರ ಜೊತೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕಲೀಂ ತೊಡಗಿದ್ದನು. ಈ ವ್ಯವಹಾರದ ಹಣಕಾಸಿನ ವಿಷಯದಲ್ಲಿ ಕಲೀಂ...

ದಿನ ಭವಿಷ್ಯ: 18-07-2019

6 hours ago

ಪಂಚಾಂಗ: ಶ್ರೀ ವಿಕಾರಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ದ್ವಿತೀಯಾ ತಿಥಿ, ಗುರುವಾರ, ಶ್ರವಣ ನಕ್ಷತ್ರ ರಾಹುಕಾಲ: ಮಧ್ಯಾಹ್ನ 2:05 ರಿಂದ 3:41 ಗುಳಿಕಕಾಲ: ಬೆಳಗ್ಗೆ 9:17 ರಿಂದ 10:53 ಯಮಗಂಡಕಾಲ: ಬೆಳಗ್ಗೆ 6:06...

ಬೆಂಗ್ಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆ

13 hours ago

ಬೆಂಗಳೂರು: ಮುಂಗಾರು ಕೊರತೆ ಎದುರಿಸುತ್ತಿದ್ದ ರಾಜ್ಯದ ಹಲವು ಭಾಗಗಳಲ್ಲಿ ಇಂದು ಸಂಜೆ ವೇಳೆಗೆ ಬೀರುಸಿನ ಮಳೆಯಾಗಿದ್ದು, ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಾವೇರಿ, ಧಾರಾವಾಡ, ರಾಯಚೂರು ಜಿಲ್ಲೆಯಗಳ ಕೆಲ ಭಾಗಗಳಲ್ಲಿ ಮಳೆಯಾಗಿದೆ. ನಗರದ ಯಶವಂತಪುರ, ಮಲ್ಲೇಶ್ವರಂ, ಮೆಜೆಸ್ಟಿಕ್, ಹೆಬ್ಬಾಳ ಸೇರಿದಂತೆ ಬಹುತೇಕ...

ಮೈತ್ರಿ ನಾಯಕರು ನನ್ನ ಮಾತು ಕೇಳಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ- ಜೆಡಿಎಸ್ ಶಾಸಕ

15 hours ago

ಕೋಲಾರ: ಮೈತ್ರಿ ಪಕ್ಷಗಳ ನಾಯಕರು ನನ್ನ ಮಾತು ಕೇಳಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೇ ಬಿಜೆಪಿಯವರು ನನಗೆ 5 ಕೋಟಿ ರೂ. ನೀಡಲು ಬಂದಿದ್ದರು ಎಂದು...

ಕೆಲಸ ಖಾಯಂ ಮಾಡುವಂತೆ ಸಿಎಂ ಕಾಲಿಗೆ ಬಿದ್ದ ಸಾರಿಗೆ ನೌಕರರು

15 hours ago

ಬೆಂಗಳೂರು: ಒಂದೆಡೆ ಸಿಎಂ ವಿಶ್ವಾಸ ಮತಯಾಚನೆ ಗೊಂದಲದಲ್ಲಿದ್ದರೆ ಇನ್ನೊಂದೆಡೆ ಕೆಲಸ ಖಾಯಂಗೊಳಿಸಿವಂತೆ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ನೌಕರರು ಹಾಗೂ ಖಾಸಗಿ ಶಾಲೆಯನ್ನು ಅನುದಾನಕ್ಕೊಳಪಡಿಸುವಂತೆ ಶಿಕ್ಷಕರು ದುಂಬಾಲು ಬಿದ್ದಿದ್ದಾರೆ. ಗುರುವಾರ ವಿಶ್ವಾಸ ಮತಯಾಚನೆ ಕುರಿತು ಹಾಗೂ ಇನ್ನಿತರೆ ರಾಜಕೀಯ ಬೆಳವಣಿಗೆಗಳ ಕುರಿತು ಸಲಹೆ ಪಡೆಯಲು...

ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್

15 hours ago

ಬೆಂಗಳೂರು: ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ತಾವು ನೀಡಿದ್ದ ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯುತ್ತೇನೆ ಎಂದು ಹೇಳಿರುವ ರೆಡ್ಡಿ ಗುರುವಾರ ಬೆಳಗ್ಗೆ ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಮಾಧ್ಯಮ ಹೇಳಿಕೆಯನ್ನು...

ಬಹಿರ್ದೆಸೆಗೆ ಕುಳಿತ್ತಿದ್ದಾಗ ಬಂತು ರೈಲು – ಹಳಿ ಮಧ್ಯೆ ಸಾವಿನ ದವಡೆಯಿಂದ ಪಾರಾದ ವೃದ್ಧ

15 hours ago

ಬಾಗಲಕೋಟೆ: ಬಹಿರ್ದೆಸೆಗೆ ಹೋಗಿದ್ದಾಗ ಏಕಾಏಕಿ ರೈಲು ಆಗಮಿಸಿದ ಹಿನ್ನೆಲೆಯಲ್ಲಿ ಹಳಿಯ ನಡುವೆಯೇ ಮಲಗಿ ಸಾವಿನ ದವಡೆಯಿಂದ ವ್ಯಕ್ತಿಯೊಬ್ಬರು ಪಾರಾದ ಘಟನೆ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವೃದ್ಧರೊಬ್ಬರು ಬಾಗಲಕೋಟೆ ರೈಲು ನಿಲ್ದಾಣದ...