Tuesday, 23rd April 2019

16 mins ago

ಮತದಾನಕ್ಕೂ ಮುನ್ನ ತಾಯಿಯ ಆಶೀರ್ವಾದ ಪಡೆದ ಮೋದಿ

ನವದೆಹಲಿ: ಮತದಾನ ಎಲ್ಲರ ಮೂಲಭೂತ ಕರ್ತವ್ಯ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇವತ್ತು ಮತದಾನ ಮಾಡಿದ್ದಾರೆ. ಅದಕ್ಕೂ ಮುನ್ನ ತಮ್ಮ ತಾಯಿಯವರ ಆಶೀರ್ವಾದ ಪಡೆದಿರುವುದು ವಿಶೇಷವಾಗಿತ್ತು. ದೇಶದಲ್ಲಿ ಮೂರನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಇಂದು ಮೋದಿ ಅವರು ಅಹಮದಾಬಾದ್‍ನ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ್ದಾರೆ. ಮತದಾನಕ್ಕೂ ಮುನ್ನ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಗಾಂಧಿನಗರದ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. “2019ನೇ ಲೋಕಸಭಾ ಚುನಾವಣೆಯ ಮೂರನೇ ಹಂತದ […]

39 mins ago

ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಮನೆಗೆ ಬಂದು ಹೆಣವಾದ!

ಹೈದರಾಬಾದ್: ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಮಗನ ಜೊತೆ ಸೇರಿಕೊಂಡು ತಾಯಿಯೇ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ. ಕಾತಿ ಶಂಕರ್ ರೆಡ್ಡಿ ಕೊಲೆಯಾದ ವ್ಯಕ್ತಿ. ಈ ಘಟನೆ ಜಿಲ್ಲೆಯ ರಾಯಚೋಟಿ ಟೌನ್ ವ್ಯಾಪ್ತಿಯ ರಾಯುಡು ಕಾಲೋನಿಯಲ್ಲಿ ಶನಿವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಖದೀರುನ್ ಮತ್ತು ಈಕೆಯ ಮಗ ಅಮೀರ್...

ತಾಯಿ ಸಾವಿನ ನೋವಿನಲ್ಲೂ ಮತದಾನ ಮಾಡಿದ ಮಗ

1 hour ago

ಹುಬ್ಬಳ್ಳಿ: ಮುಂಜಾನೆ ತಾಯಿ ತೀರಿಹೋಗಿದ್ದರೂ ಕೂಡ ಮತದಾನ ಮಾಡುವುದು ತಮ್ಮ ಕರ್ತವ್ಯ ಎಂದು ಹೆತ್ತಮ್ಮನ ಸಾವಿನ ನೋವಿನ ನಡುವೆಯೂ ಮಗ ವೋಟ್ ಮಾಡಿದ್ದಾರೆ. ಹುಬ್ಬಳ್ಳಿಯ ಮಡಿವಾಳ ನಗರದ ನಿವಾಸಿಗಳಾದ ಸಿ.ಎನ್. ನಾಯಕ ಹಾಗೂ ಅವರ ಪತ್ನಿ ಇಂದಿರಾ ನಾಯಕ ಸಾವಿನ ನೋವಿನಲ್ಲೂ...

ಮೊದಲ ಬಾರಿ ಮತದಾನ ಮಾಡಿ ಸಂದೇಶ ರವಾನಿಸಿದ್ರು ಹನುಮಂತ!

2 hours ago

ಹಾವೇರಿ: ಸರಿಗಮಪ ಮೂಲಕ ಮನೆಮತಾದ ಕುರಿಗಾಹಿ ಹನುಮಂತ ಸದೃಢ ದೇಶದ ನಿರ್ಮಾಣಕ್ಕಾಗಿ ತಮ್ಮ ಮೊದಲ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಮೊದಲ ಬಾರಿಗೆ ಮತದಾನ ಮಾಡಿದ್ದೇನೆ. ನೀವು ಕೂಡ ತಪ್ಪದೇ ಮತದಾನ ಮಾಡಿ. ಮತದಾನ ನಿಮ್ಮ...

ಕಣ್ಣೆದುರೇ 20-50 ಜನರ ಸಾವು ಕಂಡು ಭಯವಾಯ್ತು: ಕರಾಳ ಅನುಭವ ಹಂಚಿಕೊಂಡ ಉದ್ಯಮಿ

2 hours ago

ಚಿಕ್ಕಬಳ್ಳಾಪುರ: ನಾವು ತಿಂಡಿ ತಿನ್ನಲೆಂದು ಮೂರು ಜನ ಹೋಗಿದ್ದೆವು. ನಮ್ಮ ಪಕ್ಕದಲ್ಲೆ ಇಂಡೋನೇಷ್ಯಾ ದಂಪತಿ ಇದ್ದರು. ಈ ವೇಳೆ ಬಾಂಬ್ ಬ್ಲಾಸ್ಟ್ ಆಗಿದ್ದು ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹೀಗೆ ಕಣ್ಣೆದುರೇ 30-50 ಜನರ ಸಾವು ಕಂಡು ಭಯವಾಯಿತು ಎಂದು ಬೆಂಗಳೂರಿನ ಉದ್ಯಮಿ...

11 ಗಂಟೆಗೆ ಬರಬೇಕಿದ್ದ ರೈಲು ಎರಡಾದ್ರೂ ಬರ್ಲಿಲ್ಲ- ವೋಟಿಂಗ್‍ಗೆ ಹೊರಟ ಪ್ರಯಾಣಿಕರ ಪರದಾಟ

3 hours ago

ಬೆಂಗಳೂರು: ರೈಲು ಸರಿಯಾದ ಸಮಯಕ್ಕೆ ಬಾರದೇ ಮತದಾನಕ್ಕೆ ಹೊರಟವರು ಮೂರೂವರೆ ಗಂಟೆಗಳ ಕಾಲ ಪರದಾಡಿದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಇಂದು 2ನೇ ಹಂತದ ಮತದಾನ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಸಾವಿರಾರು ಮತದಾರರು ಉತ್ತರ ಕರ್ನಾಟಕಕ್ಕೆ ಹೊರಟಿದ್ರು. ಆದ್ರೆ ಯಶವಂತಪುರದಿಂದ 11 ಗಂಟೆಗೆ...

ಸರಣಿ ಬಾಂಬ್ ಬ್ಲಾಸ್ಟ್- ಮಗು ಸಮೇತ ದಂಪತಿ ಬೆಂಗ್ಳೂರಿಗೆ ವಾಪಸ್

4 hours ago

ಚಿಕ್ಕಬಳ್ಳಾಪುರ: ದ್ವೀಪರಾಷ್ಟ್ರ ಶ್ರೀಲಂಕಾದ ಸರಣಿ ಬಾಂಬ್ ಬ್ಲಾಸ್ಟ್ ನಿಂದ ಬೆದರಿದ ಕನ್ನಡಿಗರು ಒಬ್ಬೊಬ್ಬರಾಗಿ ತಾಯ್ನಾಡು ಕರ್ನಾಟಕದತ್ತ ಅಗಮಿಸುತ್ತಿದ್ದಾರೆ. ಅಂದಹಾಗೆ ಶ್ರೀಲಂಕಾ ಗೆ ಪ್ರವಾಸಕ್ಕೆ ತೆರಳಿದ್ದ ಎಚ್ ಎಸ್ ಅರ್ ಲೇಔಟ್ ನಿವಾಸಿಗಳಾದ ಮಯೂರ್-ಅಮೂಲ್ಯ ದಂಪತಿ ತಮ್ಮ ಮಗು ಜೊತೆಗೆ ಕ್ಷೇಮವಾಗಿ ಬೆಂಗಳೂರಿಗೆ...

ದಿನಭವಿಷ್ಯ: 23-04-2019

4 hours ago

ಪಂಚಾಂಗ: ಶ್ರೀ ವಿಕಾರಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಚತುರ್ಥಿ, ಮಂಗಳವಾರ, ಜ್ಯೇಷ್ಠ ನಕ್ಷತ್ರ ರಾಹುಕಾಲ: ಮಧ್ಯಾಹ್ನ 3:29 ರಿಂದ 5:03 ಗುಳಿಕಕಾಲ: ಬೆಳಗ್ಗೆ 5:03 ರಿಂದ 12:22 ಯಮಗಂಡಕಾಲ: ಬೆಳಗ್ಗೆ 9:14 ರಿಂದ...