Friday, 22nd November 2019

Recent News

ರಾತ್ರೋರಾತ್ರಿ ಬಿಜೆಪಿ ಕಾರ್ಯಕರ್ತನ ಮೇಲೆ ಲಾಂಗು ಮಚ್ಚಿನಿಂದ ದಾಳಿ!

ಬೆಂಗಳೂರು: ನಗರದ ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ರಾತ್ರೋರಾತ್ರಿ ದಾಳಿ ನಡೆದಿರುವ ಘಟನೆ ನಡೆದಿದೆ.

ಕಾರ್ಯಕರ್ತ ರಾಘವೇಂದ್ರ ಅವರು ಭಾನುವಾರ ರಾತ್ರಿ ಕೆಲಸ ಮುಗಿಸಿ ತಮ್ಮ ಕಾರಿನಲ್ಲಿ ಮನೆಗೆ ತೆರಳುವಾಗ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಮುದ್ದನಪಾಳ್ಯದಲ್ಲಿ ಬೈಕ್‍ನಲ್ಲಿ ಬಂದ 7 ಜನರು ಲಾಂಗು ಮಚ್ಚಿನಿಂದ ದಾಳಿ ನಡೆಸಿದ್ದಾರೆ.

ಈ ವೇಳೆ ರಾಘವೇಂದ್ರ ಕೂಗಿಕೊಂಡಿದ್ರಿಂದ ದುಷ್ಕರ್ಮಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ರಾಘವೇಂದ್ರಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂದಹಾಗೆ ರಾಘವೇಂದ್ರ ಇತ್ತೀಚೆಗಷ್ಟೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ರು.

ಪ್ರಿಯಕೃಷ್ಣ ಬೆಂಬಲಿಗರದ್ದೇ ಈ ಕೃತ್ಯ ಅಂತ ರಾಘವೇಂದ್ರ ಆರೋಪಿಸಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *