Wednesday, 26th June 2019

Recent News

ಸ್ವತಃ ಮನೆ ಕಟ್ಟಿಸಿಕೊಳ್ಳದ ರಾಜಕಾರಣಿ ವಾಜಪೇಯಿ!

ಕೆಲವರು ಹೇಳುವುದುಂಟು: ಅಟಲ್ ಜೀ ಅವರಿಗೆ ಸ್ವಂತ ಮನೆಯಿದೆ. ಅವರು ಎಲ್ಲಿ ಉಳಿಯುತ್ತಾರೆ? ಅವರು ಎಷ್ಟು ಮನೆ ಹೊಂದಿದ್ದಾರೆ? ಇತ್ಯಾದಿ. ಆಶ್ಚರ್ಯವಾಗಬಹುದು ವಾಜಪೇಯಿ ಅವರಿಗೆ ಇಂದಿಗೂ ತಮ್ಮದೆನ್ನುವ ಒಂದು ಸ್ವಂತ ಮನೆಯಿಲ್ಲ! ಅವರು ಇಂದಿಗೂ ಅನಿಕೇತರು.

ಗ್ವಾಲಿಯರ್ ನಲ್ಲಿ ತಮ್ಮ ತಂದೆಯ ಮನೆಯನ್ನು ವಾಜಪೇಯಿಯವರು ಗ್ರಂಥಾಲಯವಾಗಿ ಪರಿವರ್ತಿಸಿ ಬಿಟ್ಟಿದ್ದಾರೆ. ಅದು ಈಗ ಸಾರ್ವಜನಿಕ ಗ್ರಂಥಾಲಯವಾಗಿದೆ. ಇಂದಿನವರೆಗೂ ಅಟಲ್ ಅವರಿಗೆ ಸ್ವಂತ ಮನೆ ಇಲ್ಲ. ರಾಜಕೀಯದಲ್ಲಿ ಯಾವುದಾದರೂ ಪದವಿ ಪಡೆದ ಒಂದೆರಡು ವರ್ಷಗಳಲ್ಲಿ ಮನೆ, ಕಾರು, ಹಣ ಮಾಡಿಕೊಳ್ಳುವ ಜನರಿದ್ದಾರೆ. ಆದರೆ ಕಳೆದ 45 ವರ್ಷಗಳಿಂದ ರಾಜಕೀಯದಲ್ಲಿದ್ದು ಇನ್ನೂ ಸ್ವಂತ ಮನೆ ಹೊಂದದಿರುವುದು ಅಚ್ಚರಿ ಸಂಗತಿ.

ಅಟಲ್‍ರವರು ಆನೇಕ ವರ್ಷಗಳ ಕಾಲ ಪಕ್ಷದ ಕಚೇರಿಯಲ್ಲಿಯೇ ಮಲಗುತ್ತಿದ್ದುದನ್ನು ಕಂಡವರು ಆನೇಕರಿದ್ದಾರೆ. ಪಕ್ಷದ ಕಾರ್ಯಾಲಯವೇ ಅವರ ಮನೆಯಾಗಿತ್ತು. ನನಗೆ ಸ್ವಂತದ್ದೆಂದು ಇರುವುದು ನಾನು. ಅದು ಶಾಶ್ವತವಲ್ಲ. ಹೀಗಿರುವಾಗ ಮನೆ ಆಸ್ತಿಪಾಸ್ತಿ ಎಲ್ಲ ಏಕೆ ಬೇಕು? ಇದು ಅವರ ಪ್ರಶ್ನೆ.

ವಾಜಪೇಯಿ ಅವರಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಆದರ್ಶಗಳನ್ನು ನಾವು ಕಾಣಬಹುದಾಗಿದೆ. ಅಂದು ಶಾಸ್ತ್ರಿಯವರು ಬಹು ಬುದ್ಧಿವಂತಿಕೆಯುಳ್ಳ ಪ್ರಧಾನಿಯಾಗಿದ್ದರು, ಅವರಿಗೆ ಸ್ವಂತ ಮನೆ ಇರಲಿಲ್ಲ. ಅವರ ನೀತಿಯನ್ನು ಪಾಲಿಸಿದ ಮತ್ತೊಬ್ಬ ಪ್ರಧಾನಿ ವಾಜಪೇಯಿ ಅವರಾಗಿದ್ದಾರೆ. ದುರಾಸೆಗೆ ಒಳಗಾಗದೆ, ಭವ್ಯ ಬಂಗ್ಲೆ ಗೋಜಿಗೆ ಹೋಗದೆ ಭಾರತದ ಹಿಂದೂ ಧರ್ಮದ ಸನ್ಯಾಸಿಯಂತೆ ಬದುಕಿ ತೋರಿಸಿದ ಮಹಾಯೋಗಿ, ತ್ಯಾಗ ಜೀವಿಯೆಂದರೆ ವಾಜಪೇಯಿ ಅವರಾಗಿದ್ದಾರೆ.

ದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿ ವಾಜಪೇಯಿ ಕೆಲ ವರ್ಷಗಳಿಂದ ನೆಲೆಸಿದ್ದು, 2015ರಲ್ಲಿ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರು ಅವರಿದ್ದ ಸ್ಥಳಕ್ಕೆ ತೆರಳಿ ಭಾರತರತ್ನ ಗೌರವವನ್ನು ನೀಡಿದ್ದರು.

(ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *