ಬೆಂಗಳೂರು: ಅಧಿಕೃತವಾಗಿ ಸಲಹೆಗಾರರನ್ನು ನೇಮಿಸಿಕೊಳ್ಳುವ ಮೂಲಕ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.
ಇದೇ ಮೊದಲ ಬಾರಿಗೆ ಸ್ಪೀಕರ್ ಕಾಗೇರಿ ಹೊಸ ಸಂಪ್ರದಾಯ ಹುಟ್ಟುಹಾಕಿದ್ದಾರೆ. ಈ ಮೂಲಕ ವಿಧಾನಸಭೆ ನಿವೃತ್ತ ಕಾರ್ಯದರ್ಶಿಯನ್ನು ಈಗ ವಿಧಾನಸಭೆ ಸ್ಪೀಕರ್ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಈ ಬೆಳವಣಿಗೆ ಭಾರೀ ಚರ್ಚೆಗೆ ಕಾರಣವಾಗಿದೆ.
Advertisement
Advertisement
ಸ್ಪೀಕರ್ ಕಾಗೇರಿ ಅವರು ವಿಧಾನಸಭೆ ನಿವೃತ್ತ ಕಾರ್ಯದರ್ಶಿ ಓಂಪ್ರಕಾಶ್ ಅವರನ್ನು ಅಧಿಕೃತವಾಗಿ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ. ಈ ಹಿಂದೆ ಓಂ ಪ್ರಕಾಶ್ ಅವರನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತು ಎರಡಕ್ಕೂ ಮಹಾ ಕಾರ್ಯದರ್ಶಿ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಇದಕ್ಕೆ ಸಚಿವಾಲಯ ಸಿಬ್ಬಂದಿಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಈ ನಿರ್ಧಾರವನ್ನು ಸರ್ಕಾರದ ಕೈಬಿಟ್ಟಿತ್ತು. ಆದರೆ ಈಗ ಸ್ಪೀಕರ್ ಓಂ ಪ್ರಕಾಶ್ ಅವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವ ಬಗ್ಗೆ ಚರ್ಚೆ ನಡೆದಿದೆ.
Advertisement
ಸ್ಪೀಕರ್ ಕಾಗೇರಿ ನಿರ್ಧಾರಕ್ಕೆ ವಿಧಾನಸಭೆ ಸಚಿವಾಲಯದಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ವಿಧಾನಸಭೆ ಸ್ಪೀಕರ್ ಸಲಹೆಗಾರರಿಗೆ ಮಣೆ ಹಾಕಿ, ಹಾಲಿ ಅಧಿಕಾರಿಗಳ ಕಡಗಣನೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಸ್ಪೀಕರ್ ಕಾಗೇರಿ 10 ದಿನಗಳ ಹಿಂದೆ ಸಲಹೆಗಾರರನ್ನ ನೇಮಕ ಮಾಡಿಕೊಂಡಿದ್ದಾರೆ. ಈ ನಿರ್ಧಾರಕ್ಕೆ ಆರ್ಎಸ್ಎಸ್ ಸೂಚನೆ ನೀಡಿದ್ಯಾ ಅಥವಾ ಸ್ಪೀಕರ್ ಕಾಗೇರಿ ಅವರ ವೈಯುಕ್ತಿಕ ನಿರ್ಧಾರವೋ ಎಂಬ ಪ್ರಶ್ನೆ ಶುರುವಾಗಿದೆ.
Advertisement
ಕಾಗೇರಿ ಅವರು ನಿವೃತ್ತ ಕಾರ್ಯದರ್ಶಿಗಳನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವುದಕ್ಕೆ ವಿಧಾನಸಭೆ ಸಚಿವಾಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಇಂತಹ ನಿರ್ಧಾರದ ಮೂಲಕ ಅವರು ದುಂದುವೆಚ್ಚಕ್ಕೆ ಮುಂದಾದ್ರಾ? ಅವರಿಗೆ ಅನುಭವದ ಕೊರತೆ ಕಾಡುತ್ತಿದೆಯಾ? ಅಥವಾ ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಮೇಲಿನ ಅಪನಂಬಿಕೆಯೋ ಎಂಬ ಪ್ರಶ್ನೆ ಮೂಡಿವೆ.