Connect with us

ಅಸ್ಸಾಂನ ಮಾಜಿ ಮುಖ್ಯಮಂತ್ರಿ ಭೂಮಿಧರ್ ಬರ್ಮನ್ ನಿಧನ

ಅಸ್ಸಾಂನ ಮಾಜಿ ಮುಖ್ಯಮಂತ್ರಿ ಭೂಮಿಧರ್ ಬರ್ಮನ್ ನಿಧನ

ಗುವಾಹಟಿ: ಅಸ್ಸಾಂ ಮಾಜಿ ಮುಖ್ಯಮಂತ್ರಿ ಡಾ. ಭೂಮಿಧರ್ ಬರ್ಮನ್ ಭಾನುವಾರ ಸಂಜೆ ನಿಧನರಾಗಿದ್ದಾರೆ.

90 ವರ್ಷದ ಭೂಮಿಧರ್ ಅನಾರೋಗ್ಯದಿಂದ ಬಳಲುತ್ತಿದ್ದು, ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

1996 ರಲ್ಲಿ ಭೂಮಿಧರ್ ಅವರು 1996ರಲ್ಲಿ ಏಪ್ರಿಲ್ ನಿಂದ ಮೇ ವರೆಗೆ ಒಂದು ತಿಂಗಳವರೆಗೆ ಮುಖ್ಯಮಂತ್ರಿಯಾಗಿದ್ದರು. ಅಂದಿನ ಮುಖ್ಯಮಂತ್ರಿ ಹಿತೇಶ್ವರ್ ಸೈಕೈ ಅವರ ಅಕಾಲಿಕ ನಿಧನದಿಂದಾಗಿ ಭೂಮಿಧರ್ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಸದ್ಯ ಭೂಮಿಧರ್ ಅವರ ನಿಧನಕ್ಕೆ ಅಸ್ಸಾಂ ಕಾಂಗ್ರೆಸ್ ಸಂತಾಪ ಸೂಚಿಸಿದೆ. ಅಲ್ಲದೆ ರಾಜ್ಯಾದ್ಯಂತ 3 ದಿನಗಳವರೆಗೆ ಶೋಕಾಚಾರಣೆ ಮಾಡುವಂತೆ ಅಸ್ಸಾಂ ಸರ್ಕಾರ ಘೋಷಿಸಿದೆ.

Advertisement
Advertisement
Advertisement