Connect with us

ಆಶಾ ಕಾರ್ಯಕರ್ತೆ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ

ಆಶಾ ಕಾರ್ಯಕರ್ತೆ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ

ಚಿಕ್ಕಬಳ್ಳಾಪುರ: ಆಶಾ ಕಾರ್ಯಕರ್ತೆ ಮೇಲೆ ಅಂಗಡಿ ಮಾಲೀಕ ಹಾಗೂ ಮತ್ತಿಬ್ಬರು ಸೇರಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತಿಪ್ಪಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ ಸುಮತಿ ಎಂದು ಗುರುತಿಸಲಾಗಿದೆ. ಗ್ರಾಮದ ಅಂಗಡಿ ಮಾಲೀಕ ರಾಮಲಿಂಗಪ್ಪ ಮಾಸ್ಕ್ ಹಾಕದೆ ವ್ಯಾಪಾರ ಮಾಡುತ್ತಿದ್ದು, ಮಾಸ್ಕ್ ಹಾಕಿ ವ್ಯಾಪಾರ ಮಾಡಿ ಎಂದು ಆಶಾ ಕಾರ್ಯಕರ್ತೆ ಸುಮತಿ ಹೇಳಿದ್ದಾರೆ. ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಲಾಕ್‍ಡೌನ್ ನಡುವೆ ಆಂಗಡಿ ಯಾಕೆ ತೆಗೆದಿದ್ದೀರಾ ಎಂದು ವಾಗ್ವಾದ ಮಾಡಿದ್ದಾರೆ.

ಈ ವೇಳೆ ಅಂಗಡಿ ಮಾಲೀಕ ರಾಮಲಿಂಗಪ್ಪ, ಅನಂದ್, ಹಾಗೂ ನರಸಿಂಹಮೂರ್ತಿ ಆಶಾ ಕಾರ್ಯಕರ್ತೆ ಸುಮತಿ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಗೊಂಡಿರುವ ಆಶಾ ಕಾರ್ಯಕರ್ತೆಯನ್ನು ದೊಡ್ಡಬಳ್ಳಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Advertisement
Advertisement