Advertisements

ಲೆಫ್ಟಿನೆಂಟ್ ಗವರ್ನರ್ ಜೊತೆ ಮೋದಿ ಮುನಿಸು: ಕೇಜ್ರಿವಾಲ್ ಆರೋಪ

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ತಡೆಯುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಪ್ರಧಾನಿಯ ಕೋಪವನ್ನು ಎದುರಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

Advertisements

ಪ್ರಧಾನಿ ಮೋದಿ ಅವರು ಹಾಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ರೊಂದಿಗೆ ಕೋಪಗೊಂಡಿದ್ದಾರೆ. ಮೋದಿ ಜೊತೆಗಿನ ಕೋಪದಿಂದಾಗಿ ಈ ಹಿಂದೆ ನೇಮಕಗೊಂಡಿದ್ದ ನಜೀಬ್ ಗಂಜ್ 18 ತಿಂಗಳು ಅಧಿಕಾರವಾಧಿ ಹೊಂದಿದ್ದರೂ ಮೊದಲೇ ರಾಜಿನಾಮೆಯನ್ನು ನೀಡಬೇಕಾಯಿತು ಎಂದು ಕೇಜ್ರಿವಾಲ್ ದೂರಿದರು.

Advertisements

ಲೆಫ್ಟೆನೆಂಟ್ ಗವರ್ನರ್ ಮೂಲಕ ಮೋದಿ ದೆಹಲಿ ಸರಕಾರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಈಗಾಗಲೇ ಹೇಳಿದಂತೆ ದೆಹಲಿ ಸರ್ಕಾರಕ್ಕೆ ಸಾಕಷ್ಟು ಕಿರುಕುಳ ನೀಡುತ್ತಿಲ್ಲವೆಂದು ಪ್ರಧಾನಿ ಲೆಫ್ಟಿನಂಟ್ ಗವರ್ನರ್ ಮೇಲೆ ಕೋಪಗೊಂಡಿದ್ದಾರೆ. ಈ ಎಲ್ಲದರ ನಡುವೆಯೂ ದೆಹಲಿ ಸರ್ಕಾರ ಜನರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ನನ್ನ ಬಳಿಯಿರುವ ದಾಖಲೆಗಳ ಪ್ರಕಾರ ಮೋದಿ ಆಮ್ ಆದ್ಮಿ ಸರಕಾರ ಶಿಕ್ಷಣ, ಆರೋಗ್ಯ, ನೀರು ಸರಬರಾಜು, ವಿದ್ಯುತ್ ವಿತರಣೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಾಗುವ ಅಭಿವೃದ್ಧಿ ಕೆಲಸಗಳನ್ನು ತಡೆಯುವಂತೆ ಸಾಕಷ್ಟು ಒತ್ತಡವನ್ನು ಗವರ್ನರ್ ಮೇಲೆ ಮೋದಿ ಹಾಕುತ್ತಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದರು.

Advertisements

ನಜೀಬ್ ಜಂಗ್ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ವೇಳೆ ದೆಹಲಿ ಸರ್ಕಾರದ ಹಲವು ನೀತಿಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇದರಿಂದಾಗಿ ದೆಹಲಿ ಸರ್ಕಾರ ಮತ್ತು ನಜೀಬ್ ಜಂಗ್ ಅವರ ನಡುವಿನ ತಿಕ್ಕಾಟ ರಾಷ್ಟ್ರದೆಲ್ಲೆಡೆ ಸುದ್ದಿಯಾಗಿ ಚರ್ಚೆಯಾಗುತಿತ್ತು. 2016ರ ಡಿಸೆಂಬರ್ ನಲ್ಲಿ ನಜೀಬ್ ಜಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಕೆಲಸಕ್ಕೆ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅಧಿಕಾರವನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ವೇಳೆ ಕೋರ್ಟ್ ದೆಹಲಿಯಲ್ಲಿ ಆಯ್ಕೆಯಾದ ಸರ್ಕಾರಕ್ಕೆ ಕೆಲ ಅಧಿಕಾರವಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿತ್ತು.

 

Advertisements
Exit mobile version