ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಗಳು ಆನ್‍ಲೈನ್ ಮಾರುಕಟ್ಟೆಯಲ್ಲಿ 34 ಸಾವಿರ ರೂಪಾಯಿ ಕಳೆದುಕೊಂಡು ಸುದ್ದಿಯಾಗಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಮಗಳು ಹರ್ಷಿತಾ ಕೇಜ್ರಿವಾಲ್ ಒಎಲ್ಎಕ್ಸ್ ನಲ್ಲಿ ಸೋಫಾ ಮಾರಾಟಕ್ಕೆ ಹಾಕಿದ್ದರು. ಇದನ್ನು ಗಮನಿಸಿದ ಖದೀಮ ಕೊಳ್ಳುತ್ತೇನೆ ಎಂದು ಹೇಳಿ ನಂಬಿಸಿದ್ದಾನೆ. ಹರ್ಷಿತಾಗೆ ನಂಬಿಕೆ ಬರಲೆಂದು ಸ್ವಲ್ಪ ಹಣವನ್ನು ಖಾತೆಗೆ ಹಾಕಿದ್ದಾನೆ.
ನಂತರ ಬಾರ್ ಕೋಡ್ ಒಂದನ್ನು ಕಳುಹಿಸಿ ಸ್ಕ್ಯಾನ್ ಮಾಡಲು ಹೇಳಿದ್ದಾನೆ. ಹರ್ಷಿತಾ ಆ ಕೋಡ್ ಸ್ಕ್ಯಾನ್ ಮಾಡಿದ್ದಾರೆ. ಇದಾದ ಬಳಿಕ ಖಾತೆಯಿಂದ 2 ಬಾರಿ ಹಣ ವಿತ್‍ಡ್ರಾ ಆಗಿದೆ. 20 ಸಾವಿರ, 14ಸಾವಿರ ರೂಪಾಯಿ ತೆಗೆಯಲಾಗಿದೆ. ತಕ್ಷಣ ಮುಖ್ಯಮಂತ್ರಿಗಳ ನಿವಾಸದ ಬಳಿ ಇರುವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಖದೀಮನ ಹುಡುಕಾಟದಲ್ಲಿ ಇದ್ದಾರೆ.