Connect with us

Cricket

ಐಪಿಎಲ್‌ ಹರಾಜಿಗೆ ಅರ್ಜುನ್‌ ತೆಂಡೂಲ್ಕರ್‌ – ಯಾವ ತಂಡ ಬಿಡ್‌ ಮಾಡಬಹುದು?

Published

on

ಮುಂಬೈ: ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್ ಪುತ್ರ ಅರ್ಜುನ್‌ ತೆಂಡೂಲ್ಕರ್ ಹೆಸರು ಈ ಬಾರಿಯ ಐಪಿಎಲ್‌ ಹರಾಜು ಪ್ರಕ್ರಿಯೆಗೆ ನೋಂದಣಿಯಾಗಿದೆ.

ಮುಂಬೈ ಹಿರಿಯರ ತಂಡವನ್ನು ಪ್ರತಿನಿಧಿಸಲು ಅರ್ಹತೆ ಪಡೆದಾಗಲೇ ಅರ್ಜುನ್‌ ತೆಂಡೂಲ್ಕರ್‌ ಈ ಬಾರಿ ಐಪಿಎಲ್‌ ಬಿಡ್‌ನಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಕ್ರಿಕೆಟ್‌ ವಲಯದಲ್ಲಿ ಹರಿದಾಡಿತ್ತು. ಈಗ ಈ ಸುದ್ದಿ ನಿಜವಾಗಿದ್ದು ಅರ್ಜುನ್‌ ತೆಂಡೂಲ್ಕರ್‌ಗೆ 20 ಲಕ್ಷ ರೂ. ಮೂಲ ಬೆಲೆ ನಿಗದಿಯಾಗಿದೆ.

ಕೆಲ ವರ್ಷಗಳಿಂದ ಮುಂಬೈ ತಂಡದ ನೆಟ್‌ ಬೌಲ್‌ ಆಗಿರುವ ಅರ್ಜುನ್‌ ತೆಂಡೂಲ್ಕರ್‌ ಈ ಬಾರಿಯ ಐಪಿಎಲ್‌ಗೆ ಯುಎಇಗೆ ತೆರಳಿದ್ದರು. ಆಲ್‌ರೌಂಡರ್‌ ಆಗಿರುವ ಇವರು ಈ ಹಿಂದೆ 2017ರ ವಿಶ್ವಕಪ್‌ ವೇಳೆ ಭಾರತ ಮಹಿಳಾ ತಂಡ ನೆಟ್‌ ಬೌಲರ್‌ ಆಗಿದ್ದರು.

21 ವರ್ಷದ ಅರ್ಜುನ್‌ ತೆಂಡೂಲ್ಕರ್‌ ಯಾರ ಪಾಲಾಗಲಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಆದರೆ ತನ್ನ ತಂಡದ ನೆಟ್‌ ಬೌಲರ್‌ ಆಗಿರುವ ಹಿನ್ನೆಲೆಯಲ್ಲಿ 5 ಬಾರಿಯ ಐಪಿಎಲ್‌ ಚಾಂಪಿಯನ್‌ ಆಗಿರುವ ಮುಂಬೈ ಬಿಡ್‌ ಮಾಡುವ ಸಾಧ್ಯತೆ ಹೆಚ್ಚಿದೆ.

ಈಗಾಗಲೇ ಮುಂಬೈ ಪರ ಎರಡು ಪಂದ್ಯವಾಡಿದ್ದಾರೆ. ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅರ್ಜುನ್‌ 1 ವಿಕೆಟ್‌ ಕಿತ್ತಿದ್ದರು.

Click to comment

Leave a Reply

Your email address will not be published. Required fields are marked *