ಪುತ್ರಿಗಾಗಿ ಮತ್ತೆ ನಿರ್ದೇಶನಕ್ಕಿಳಿದ ಅರ್ಜುನ್ ಸರ್ಜಾ: ಚಿತ್ರಕ್ಕೆ ಶುಭಹಾರೈಸಿದ ಪವನ್ ಕಲ್ಯಾಣ್

Advertisements

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟನಾಗಿ ಬಹುಭಾಷೆಯಲ್ಲಿ ಯಶಸ್ಸು ಕಂಡಿರುವ ನಟ. ನಟನೆಯ ಜತೆ ನಿರ್ದೇಶನ, ಬರವಣಿಗೆ, ನಿರ್ಮಾಣದ ಮೂಲಕ ಬಣ್ಣದ ಲೋಕದಲ್ಲಿ ಗಮನ ಸೆಳೆದಿದ್ದಾರೆ. ಇದೀಗ ಮಗಳ ಯಶಸ್ಸಿಗಾಗಿ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ.

Advertisements

ಬಹುಭಾಷಾ ನಟನಾಗಿ ಗುರುತಿಸಿಕೊಂಡಿರುವ ಕನ್ನಡ ಮೂಲದ ನಟ ಅರ್ಜುನ್ ಸರ್ಜಾ ಕನ್ನಡ ಚಿತ್ರರಂಗದಲ್ಲೂ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಮಗಳು ಐಶ್ವರ್ಯಳ ಚಿತ್ರರಂಗದ ಯಶಸ್ಸಿಗಾಗಿ ಟಾಲಿವುಡ್‌ನಲ್ಲಿ ನಿರ್ದೇಶನದ ಜೊತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಸಂಜನಾ ಗಲ್ರಾನಿ ಮಗುವಿನ ನಾಮಕರಣ: ಹೆಸರೇನು ಗೊತ್ತಾ?

Advertisements

ಅರ್ಜುನ್ ಸರ್ಜಾ ತಮ್ಮದೇ ಶ್ರೀ ರಾಮ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿರುವ 15ನೇ ಚಿತ್ರಕ್ಕೆ ಐಶ್ವರ್ಯ ಅರ್ಜುನ್ ಅವರನ್ನು ತೆಲುಗಿನಲ್ಲಿ ನಾಯಕಿಯಾಗಿ ಪರಿಚಯಿಸುತ್ತಿದ್ದಾರೆ. ಐಶ್ವರ್ಯಗೆ ಜೋಡಿಯಾಗಿ ವಿಶ್ವಕ್ ಸೇನ್ ಕಾಣಿಸಿಕೊಳ್ತಿದ್ದಾರೆ. ಖಳನಾಟನಾಗಿ ಜಗಪತಿ ಬಾಬು ಅಬ್ಬರಿಸಲಿದ್ದಾರೆ.

Advertisements

ಇದೊಂದು ರೋಡ್ ಟ್ರಿಪ್ ಸಿನಿಮಾವಾಗಿದ್ದು, ಶೀಘ್ರದಲ್ಲಿಯೇ ಶೂಟಿಂಗ್ ಶುರುವಾಗಲಿದೆ. ಇತ್ತಿಚೆಗಷ್ಟೇ ಚಿತ್ರದ ಮುಹೂರ್ತ ನೆರವೇರಿದ್ದು, ಪವನ್ ಕಲ್ಯಾಣ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ವೇಳೆ ಪ್ರಕಾಶ್ ರೈ, ನಿರ್ದೇಶಕ ರಾಘವೇಂದ್ರ ರಾವ್ ಕೂಡ ಉಪಸ್ಥಿತರಿದ್ದರು. ಒಟ್ನಲ್ಲಿ ಕನ್ನಡತಿ ಐಶ್ವರ್ಯ, ಈ ಬಾರಿ ತೆಲುಗಿನ ಪ್ರೇಕ್ಷಕರ ಮನ ಗೆಲ್ಲುತ್ತಾರಾ ಅಂತಾ ಕಾದು ನೋಡಬೇಕಿದೆ.

Live Tv

Advertisements
Exit mobile version