Friday, 13th December 2019

Recent News

ಮದ್ವೆಯಾಗದೆ ಗಂಡು ಮಗುವಿಗೆ ತಂದೆಯಾದ ನಟ ಅರ್ಜುನ್

ಮುಂಬೈ: ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಮದುವೆಯಾಗದೆ ಗಂಡು ಮಗುವಿಗೆ ತಂದೆ ಆಗಿದ್ದಾರೆ.

ಅರ್ಜುನ್ ರಾಂಪಾಲ್ ಅವರು ತಮ್ಮ ಗೆಳತಿ ಗೈಬ್ರಿಲಾ ದೇಮಿತ್ರಿಯಾದ್ ಜೊತೆ ಲಿವಿಂಗ್ ಟುಗೆದರ್ ರಿಲೇಶನ್‍ಶಿಪ್ ನಲ್ಲಿ ಇದ್ದರು. ಇಂದು ಗೈಬ್ರಿಲಾ ಅವರು ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಅರ್ಜುನ್ ರಾಂಪಾಲ್‍ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅರ್ಜುನ್ ಮಕ್ಕಳಾದ ಮಹಿಕಾ ಹಾಗೂ ಮೈರಾ, ಗೈಬ್ರಿಲಾರನ್ನು ನೋಡಲು ಆಸ್ಪತ್ರೆಗೆ ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಅರ್ಜುನ್, ನನ್ನ ಮಕ್ಕಳು ಸಂತೋಷದಿಂದ ಗೆಬ್ರಿಲಾಳನ್ನು ಒಪ್ಪಿಕೊಂಡಿದ್ದಾರೆ. ಗೆಬ್ರಿಲಾ ನನ್ನ ಕುಟುಂಬದ ಒಂದು ಭಾಗವಾಗಿರಬೇಕು ಎಂದು ನಾನು ಭಾವಿಸಿದೆ. ನನ್ನ ಮಕ್ಕಳು ನನಗೆ ಒಂದು ಪ್ರಶ್ನೆಯನ್ನು ಕೇಳದೆ ಆಕೆಯನ್ನು ಒಪ್ಪಿಕೊಂಡಿದ್ದಾರೆ. ನಾನು ತುಂಬಾನೇ ಅದೃಷ್ಟ ಮಾಡಿದೆ ಎಂದು ಹೇಳಿದ್ದರು.

 

View this post on Instagram

 

Blessed to have you and start all over again….thank you baby for this baby 👶🏽

A post shared by Arjun (@rampal72) on

ಏಪ್ರಿಲ್ ತಿಂಗಳಿನಲ್ಲಿ ಅರ್ಜುನ್ ರಾಂಪಾಲ್ ತಾವು ತಂದೆ ಆಗುತ್ತಿರುವ ವಿಷಯನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಗೈಬ್ರಿಲಾ ಗರ್ಭಿಣಿಯಾಗಿದ್ದಾಗ ಬೇಬಿ ಮೂನ್ ಗಾಗಿ ಜೋಡಿ ಮಾಲ್ಡೀವ್ಸ್ ಗೆ ತೆರಳಿ ಎಂಜಾಯ್ ಮಾಡಿದ್ದರು.

Leave a Reply

Your email address will not be published. Required fields are marked *