Connect with us

ವಿದೇಶದಲ್ಲಿ ದುಬಾರಿ ಕಾರ್ ಖರೀದಿ ಮಾಡಿದ ಸೀರಿಯಲ್ ನಟಿ

ವಿದೇಶದಲ್ಲಿ ದುಬಾರಿ ಕಾರ್ ಖರೀದಿ ಮಾಡಿದ ಸೀರಿಯಲ್ ನಟಿ

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆದೇವ್ರು ಧಾರಾವಾಹಿ ಖ್ಯಾತಿಯ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಹೊಸ ಕಾರ್ ಖರೀದಿ ಮಾಡಿದ್ದಾರೆ. ದುಬಾರಿ ಕಾರ್‍ ಫೋಟೋವನ್ನು ಅರ್ಚನಾ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಮರ್ಸಿಡಿಸ್ ಬೆಂಜ್ ಕಾರ್ ಖರೀದಿ ಮಾಡಿದ್ದೇವೆ. ವಿಘ್ನೇಶ್ ಮತ್ತು ನಾನು ಮರ್ಸಿಡಿಸ್ ಬೆಂಜ್ ಜೊತೆ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣವನ್ನು ಮಾಡಬೇಕೆಂದು ಆಶಿಸುತ್ತೇವೆ ಎಂದು ಬರೆದುಕೊಂಡು ಕಾರ್ ಬಳಿ ನಿಂತುಕೊಂಡಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿ ಬರ್ತಿದ್ದ ರಂಜಿನಿ ರಾಘವನ್‍ಗೆ ರಾತ್ರಿ ಏನಾಯ್ತಂತೆ ಗೊತ್ತಾ?

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಧುಬಾಲ, ಮನೆದೇವ್ರು ಧಾರಾವಾಹಿಯಲ್ಲಿ ಅರ್ಚನಾ ನಟಿಸಿದ್ದರು, 2 ತಮಿಳು ಧಾರಾವಾಹಿಯಲ್ಲಿ ನಟಿಸಿದ್ದರು. ಮದುವೆಯಾಗಿ ನ್ಯೂಯಾರ್ಕ್‍ಗೆ ತೆರಳಿದಮೇಲೆ ಅಲ್ಲಿ 6 ತಿಂಗಳುಗಳ ಕಾಲ ಅರ್ಚನಾ ಕೆಲಸ ಹುಡುಕಿದ್ದರು. ನಟನೆಗೆ ಬರುವ ಮುನ್ನ ಎಚ್‍ಆರ್ ಕೆಲಸ ಮಾಡುತ್ತಿದ್ದ ಅರ್ಚನಾ ಅವರು ವಿದೇಶಕ್ಕೆ ಹೋದಮೇಲೆ ಮತ್ತೆ ಎಚ್‍ಆರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕನ್ನಡಿಗಳೆಂದು ತಮಿಳುನಾಡಿನಲ್ಲಿ ನನ್ನ ಸಹಾಯಕ್ಕೆ ಯಾರೂ ಬರ್ತಿಲ್ಲ: ವಿಜಯಲಕ್ಷ್ಮಿ

ಅರ್ಚನಾ ಮದುವೆ ನಂತರ ಪತಿ ವಿಘ್ನೇಶ್ ಕುಮಾರ್ ಜೊತೆಗೆ ಅವರು ವಿದೇಶದಲ್ಲಿ ನೆಲೆಸಿದ್ದಾರೆ. ಇಷ್ಟುದಿನ ನ್ಯೂಯಾರ್ಕ್‍ನಲ್ಲಿದ್ದ ಅರ್ಚನಾ ಫ್ಲೋರಿಡಾಗೆ ಬಂದು ಈಗ ನೆಲೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅರ್ಚನಾ ಹೊಸ ಆರಂಭ, ಹೊಸ ಜೀವನ, ಹೊಸ ಸ್ಥಳ, ಎಲ್ಲವೂ ಹೊಸದು. ಹೊಸ ಕೆಲಸ, ಹೊಸ ಅನುಭವ. ಜೀವನ ಸದಾ ಖುಷಿಯಿಂದ, ಆಸಕ್ತಿದಾಯಕವಾಗಿರುವುದು ಎಂದು ಹೇಳಿಕೊಂಡಿದ್ದಾರೆ. ಇದೀಗ ದುಬಾರಿ ಕಾರ್ ಖರೀದಿ ಮಾಡಿರುವ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Advertisement
Advertisement