Connect with us

Cinema

ಗ್ರ‍್ಯಾಂಡ್ ಫಿನಾಲೆಗೆ ಬರ‍್ತಾರಂತೆ ಅರವಿಂದ್, ದಿವ್ಯಾ ಉರುಡುಗ

Published

on

ಬಿಗ್‌ಬಾಸ್‌ಮನೆಯ ನಿಜವಾದ ಆಟವನ್ನು ಸ್ಪರ್ಧಿಗಳು ಶುರುಮಾಡಿದ್ದಾರೆ. ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಪ್ರತಿಯೊಬ್ಬರಿಗೂ ತಾನೂ ಗೆಲ್ಲಬೇಕು ಎನ್ನುವ ಹಂಬಲವಿದೆ. ೧೪ ಜನ ಸ್ಪರ್ಧಿಗಳಿದ್ದಾರೆ. ಆದರೆ, ಬಿಗ್ ಬಾಸ್ ೮ ಸದಸ್ಯರೊಬ್ಬರಿಗೆ ಈಗಲೇ ಗ್ರ‍್ಯಾಂಡ್ ಫಿನಾಲೆ ಚಿಂತೆ ಶುರುವಾಗಿದೆ.

ರಘು ಗೌಡ ಅಡುಗೆ ಮನೆಯಲ್ಲಿದ್ದ ವೈಷ್ಣವಿ ಮತ್ತು ದಿವ್ಯಾ ಉರುಡುಗ ಜೊತೆ ಗ್ರ‍್ಯಾಂಡ್ ಫಿನಾಲೆ ಹೇಗಿರುತ್ತೆ ಎಂದು ಚರ್ಚೆ ಮಾಡಿದ್ದಾರೆ. ತಮ್ಮದೇ ಒಂದು ಕಲ್ಪನೆಯಲ್ಲಿ ಗ್ರ‍್ಯಾಂಡ್ ಫಿನಾಲೆ ಹೇಗಿರುತ್ತದೆ ಎಂಬುದನ್ನು ವಿವರಿಸಿದ್ದಾರೆ.

ದಿವ್ಯಾ, ಅರವಿಂದ್ ಬಿಗ್‌ಬಾಸ್ ಮನೆಯಲ್ಲಿರುವ ಒಂದು ಜೋಡಿ ಎನಿಸಿಕೊಂಡು ಬಿಟ್ಟಿದ್ದಾರೆ. ಒಬ್ಬರಿಗೊಬ್ಬರು ಸದಾ ಜೊತೆಯಾಗಿ ಇರುತ್ತಾರೆ. ವೇದಿಕೆ ಮೇಲೆ ದಿವ್ಯಾ, ಅರವಿಂದ್ ಹೋಗ್ತಾರೆ, ಇಬ್ಬರಲ್ಲಿ ಯಾರ್ ಸೋತ್ರು ಲಾಸ್ ಇಲ್ಲ ಎಂಬುದು ದಿವ್ಯಾ ಮನಸ್ಸಿಲ್ಲಿದೆ ಎಂದು ರಘು ಹೇಳುತ್ತಾ ದಿವ್ಯಾ ಅವರ ಕಾಲೆಳೆದಿದ್ದಾರೆ.

ದಿವ್ಯಾ ಅಂದುಕೊಳ್ತಾ ಇರ್ತಾಳೆ, ಟಾಪ್ 2ರಲ್ಲಿ ಅರವಿಂದ್ ಮತ್ತು ದಿವ್ಯಾ. ಗೆದ್ರು, ಸೋತ್ರು ಕೂಡ ನೋವು ಮತ್ತು ಖುಷಿ ಎರಡೂ ಇರತ್ತೆ. ಬಿಗ್ ಬಾಸ್ ಗ್ರ‍್ಯಾಂಡ್ ಫಿನಾಲೆ ವೇದಿಕೆ ಮೇಲೆ ಹೇಗೆ ರಿಯಾಕ್ಟ್ ಮಾಡಬೇಕು ಎಂದು ಎಷ್ಟು ಕನಸು ಕಂಡಿರುತ್ತಾಳೋ? ಯಾರೋ ಒಬ್ಬರ ಕೈಯನ್ನು ಎತ್ತಿದ ಕೂಡಲೇ, ಒಬ್ಬರಿಗೊಬ್ಬರು ತಬ್ಬಿಕೊಂಡು, ನಿಂಗ್ ಬಂದ್ರೆ ಏನು, ನಂಗ್ ಬಂದ್ರೆ ಏನು? ವಿಲ್ ಯೂ ಮ್ಯಾರಿ ಮೀ..’ ಎಂದು ಅಲ್ಲಿಯೇ ಅರವಿಂದ್ ತಾಳಿ ಕಟ್ಟಿಬಿಡ್ತಾನೆ ಎಂದು ಅರವಿಂದ್ ಹೇಳಿದ್ದಾರೆ. ಈ ವೇಳೆ ದಿವ್ಯಾ ಜೋರಾಗಿ ನಕ್ಕಿದ್ದಾರೆ.

ನೀವು ಲವ್ ಮಾಡ್ತಾ ಇದ್ದೀರಾ? ಅಥವಾ ಗೊಂದಲದಲ್ಲಿ ಇದ್ದೀರಾ..? ಹಾಗೇ ಸುಮ್ಮನೆ ಕೇಳ್ತಾ ಇದಿನಿ ಎಂದು ರಘು ಕೇಳಿದಾಗ ಎಲ್ಲಿಗೂ ಹೋಗಿಲ್ಲ, ಅರವಿಂದ್ ಬರೆದ ಪತ್ರಗಳಲ್ಲಿ ಏನ್ ಹೇಳಿದ್ದಾರೆ ಅಂದ್ರೆ, ಇನ್ನೂ ಮಾತಾಡಬೇಕು…ನೋಡೋಣ.. ಅಂತ ಹೇಳಿದ್ದಾರೆ ಎಂದು ದಿವ್ಯಾ ಹೇಳಿದ್ದಾರೆ.

ನನಗೆ ಲವ್ ಸ್ಟೋರಿ ಅಂದರೆ ತುಂಬ ಇಷ್ಟ. ಜೊತೆಯಲ್ಲಿ ಇದ್ದವರು ಲವ್ ಮಾಡೋದು ಚೆನ್ನಾಗಿರುತ್ತದೆ. ನನಗೆ ಆಗ್ತಾ ಇಲ್ವಲ್ಲಾ ಅಂತ ಹೊಟ್ಟೆ ಹುರಿ ಎಂದು ರಘು ಹೇಳಿದ್ದಾರೆ. ಹೀಗೆ ಡೈಲಾಗ್ ಹೊಡೆದ ರಘು, ತಕ್ಷಣವೇ ಕ್ಯಾಮೆರಾ ಮುಂದೆ ನಿಂತು ವಿದ್ಯಾ ಸುಮ್ಮನೆ ಡೈಲಾಗ್ ಹೇಳಿದೆ ಅಷ್ಟೇ ಎಂದು ತಮ್ಮ ಪತ್ನಿಗೆ ಹೇಳಿದರು.

ನಿಮಗೆ ಮನೆಗೆ ಹೋಗಬೇಕು ಅಂತಾ ಇದೆಯಾ. ಅಷ್ಟು ಭಯ ಇದ್ದರೆ ಸಾಕು ಎಂದು ವೈಷ್ಣವಿ ಹೇಳಿದ್ದಾರೆ. ಆಗ ರಘು ಪಾಡನ್ನು ನೋಡಿ ವೈಷ್ಣವಿ ಮತ್ತು ದಿವ್ಯಾ ಉರುಡುಗ ಜೋರಾಗಿ ನಕ್ಕಿದ್ದಾರೆ. ಬಿಗ್‌ಬಾಸ್ ಮನೆಯ ಗ್ರಾö್ಯಂಡ್ ಫಿನಾಯಿಲೆಯಲ್ಲಿ ಯಾರಿರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Click to comment

Leave a Reply

Your email address will not be published. Required fields are marked *