Connect with us

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಮ್ಯಾಕ್ಸಿ-ಸ್ಕೂಟರ್ ಬಿಡುಗಡೆ

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಮ್ಯಾಕ್ಸಿ-ಸ್ಕೂಟರ್ ಬಿಡುಗಡೆ

ಪುಣೆ: ದೇಶೀಯ ಮಾರುಕಟ್ಟೆಗೆ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಮ್ಯಾಕ್ಸಿ-ಸ್ಕೂಟರ್ ಬಿಡುಗಡೆಯಾಗಿದೆ. ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್‌ 160.03 ಸಿಸಿ , ಮೂರು ವಾಲ್ವ್ , ಫ್ಯೂಯೆಲ್ ಇಂಜೆಕ್ಟ್ ಎಂಜಿನ್ ಹೊಂದಿದ್ದು 7,600 ಆರ್‌ಪಿಎಂನಲ್ಲಿ 11 ಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 11.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಮ್ಯಾಕ್ಸಿ-ಸ್ಕೂಟರಿನ ಪುಣೆ ಎಕ್ಸ್-ಶೋರೂಮ್ ಬೆಲೆ 1.26 ಲಕ್ಷ ರೂ. ಇದೆ

ಹೊಸ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು, ಸ್ಪ್ಲಿಟ್ ಎಲ್ಇಡಿ ಹೆಡ್‌ಲ್ಯಾಂಪ್, ಸ್ಕೂಟರ್ ಮುಂಭಾಗದಲ್ಲಿ ವಿಂಡ್‌ಸ್ಕ್ರೀನ್, ದೊಡ್ಡ ಸಿಂಗಲ್-ಪೀಸ್ ಸೀಟ್, ಎಲ್ಇಡಿ ಟೈಲ್ ಲೈಟ್ಸ್ ಮತ್ತು ಇತರೆ ವೈಶಿಷ್ಟ್ಯಗಳನ್ನು ಹೊಂದಿದೆ.

ಎಸ್‌ಎಕ್ಸ್‌ಆರ್ 160ರ ಮುಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 140 ಎಂಎಂ ಡ್ರಮ್ ಬ್ರೇಕ್‍ನೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ವ್ಯವಸ್ಥೆಯನ್ನು ಪಡೆಯುತ್ತದೆ. ಮುಂಭಾಗ ಮತ್ತು ಹಿಂಭಾಗದ ಟೈರ್‌ಗಳು ಒಂದೇ ಗಾತ್ರದಲ್ಲಿದ್ದು (120 / 70-12) ಕುತೂಹಲಕಾರಿಯಾಗಿದೆ. ಎಸ್‌ಎಕ್ಸ್‌ಆರ್ 7-ಲೀಟರ್ ಇಂಧನ ಟ್ಯಾಂಕ್ ಹೊಂದಿದೆ.

 

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಬಹುಕ್ರಿಯಾತ್ಮಕ ಪೂರ್ಣ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಬರುತ್ತದೆ. ಇದು ಮೈಲೇಜ್ ಸೂಚಕ, ಆರ್‌ಪಿಎಂ ಮೀಟರ್, ಇಂಧನ ಎಷ್ಟಿದೆ ಮತ್ತು ಇತರ ಮಾಹಿತಿಯನ್ನು ತೋರಿಸುತ್ತದೆ. ಎಸ್‌ಎಕ್ಸ್‌ಆರ್ 160 ಐಚ್ಚಿಕ ಸಂಪರ್ಕಿತ ತಂತ್ರಜ್ಞಾನದೊಂದಿಗೆ ಬರುತ್ತದೆ. ಸವಾರರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಸ್ಕೂಟರ್‌ಗೆ ಸಂಪರ್ಕಿಸಲು ಇದು ಅನುವು ಮಾಡಿಕೊಡುತ್ತದೆ.

Advertisement
Advertisement