ಸಿದ್ಧಾರೂಢರ ಗದ್ದುಗೆಯ ದರ್ಶನ ಪಡೆದ ಗಾಯಕ ಜುಬಿನ್ ನೌಟಿಯಾಲ್

Public TV
1 Min Read

ಬಾಲಿವುಡ್ ಟ್ರೆಂಡಿಂಗ್- ಹಿಂದಿ ಖ್ಯಾತ ಹಿನ್ನೆಲೆ ಗಾಯಕ ಜುಬಿನ್ ನೌಟಿಯಾಲ್ (Jubin Nautiyal) ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ಸಿದ್ಧಾರೂಢರ ಗದ್ದುಗೆಯ ದರ್ಶನ ಪಡೆದರು. ಇದನ್ನೂ ಓದಿ:ಹಿಂದಿ ‘ಬಿಗ್ ಬಾಸ್ 17’ರ ವಿನ್ನರ್ ಆದ ಮುನಾವರ್ ಫಾರೂಕಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ‘ಗಾಳಿಪಟ ಉತ್ಸವ’ದ ನಿಮಿತ್ತವಾಗಿ ಗಾಯನ ಕಾರ್ಯಕ್ರಮಕ್ಕೆ ಕಳೆದ ಎರಡು ದಿನಗಳಿಂದ ಜುಬಿನ್ ನೌಟಿಯಾಲ್ ಮತ್ತು ಅವರ ತಂಡ ಹುಬ್ಬಳ್ಳಿಯಲ್ಲಿದ್ದಾರೆ. ಕಾರ್ಯಕ್ರಮದ ಬಳಿಕ ಹುಬ್ಬಳ್ಳಿ ಧಾರವಾಡ ನಗರಗಳ ರೌಂಡ್ ಹಾಕಿದ ನೌಟಿಯಾಲ್, ಅಮರಗೋಳದ ಚಂದ್ರಮೌಳೇಶ್ವರ ದೇವಸ್ಥಾನ ಮತ್ತು ಸಿದ್ಧಾರೂಢರ ಮಠಕ್ಕೆ (Siddharudh Swami Math) ಭೇಟಿ ನೀಡಿದರು. ಇಂದು (ಜ.29) ಸಿದ್ಧಾರೂಢರ ಗದ್ದುಗೆ ವಿಶೇಷ ಪೂಜೆ ಸಹ ಸಲ್ಲಿಸಿದ್ದು, ಮಠದ ಆಡಳಿತ ಮಂಡಳಿಯ ವತಿಯಿಂದ ನೌಟಿಯಾಲ್ ಅವರಿಗೆ ಸನ್ಮಾನಿಸಲಾಗಿದೆ.

200ಕ್ಕೂ ಹೆಚ್ಚು ಹಾಡುಗಳಿಗೆ ಗಾಯನ ಜುಬಿನ್ ನೌಟಿಯಾಲ್ ಹಾಡಿದ್ದಾರೆ. ಶಿವರಾಜ್‌ಕುಮಾರ್ (Shivarajkumar), ಪ್ರಣೀತಾ ನಟನೆಯ ‘ಮಾಸ್ ಲೀಡರ್’ (Mass Leader) ಚಿತ್ರದಲ್ಲಿನ ‘ದೀಪವೇ ನಿನ್ನ ಕಣ್ಣು’ ಸಾಂಗ್ ಅನ್ನು ಜುಬಿನ್ ಅವರು ಹಾಡಿದ್ದರು. ಈ ಮೂಲಕ ಕನ್ನಡ ಚಿತ್ರರಂಗ ಜೊತೆ ಗಾಯಕ ಜುಬಿನ್ ಒಡನಾಟ ಹೊಂದಿದ್ದಾರೆ.

Share This Article