ಇಸ್ರೇಲ್‌ ಮೇಲೆ ದಾಳಿ ಬೆದರಿಕೆ – ಇರಾನ್ ಸರ್ವೋಚ್ಚ ನಾಯಕನ ಎಕ್ಸ್‌ ಖಾತೆ ಅಮಾನತು

By
1 Min Read

ಟೆಹ್ರಾನ್: ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇರಾನ್‌ನ (Iran) ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಎಕ್ಸ್‌ ಖಾತೆಯನ್ನು ಅಮಾನತುಗೊಳಿಸಲಾಗಿದೆ.

ಇತ್ತೀಚೆಗೆ ಇರಾನ್ ಮೇಲೆ ಇಸ್ರೇಲ್ (Israel) ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಅವರ ಎಕ್ಸ್‌ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಪೋಸ್ಟ್‌ನಲ್ಲಿ ಇಸ್ರೇಲ್‌ ತಪ್ಪು ಮಾಡಿದೆ. ಇರಾನ್ ಮೇಲಿನ ಅದರ ಲೆಕ್ಕಾಚಾರ ತಪ್ಪಾಗಿದೆ. ಇರಾನ್ ರಾಷ್ಟ್ರವು ಯಾವ ರೀತಿಯ ಶಕ್ತಿ, ಸಾಮರ್ಥ್ಯ ಹೊಂದಿದೆ ಎಂಬುದನ್ನು ನಾವು ಇಸ್ರೇಲ್‌ಗೆ ಅರ್ಥ ಮಾಡಿಸುತ್ತೇವೆ ಎಂದು ಅವರು ಬರೆದುಕೊಂಡಿದ್ದರು. ಇದನ್ನೂ ಓದಿ: ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಭಾರತ-ಚೀನಾ ಹ್ಯಾಂಡ್‌ಶೇಕ್; ಫಲ ನೀಡುತ್ತಾ ಒಪ್ಪಂದ?

ಶನಿವಾರ ಇರಾನ್‌ನಲ್ಲಿ ಸೇನಾ ನೆಲೆಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ನಂತರ ಖಮೇನಿ ಇಸ್ರೇಲ್‌ನಲ್ಲಿ ಮಾತನಾಡುವ ಹೀಬ್ರೂ ಭಾಷೆಯಲ್ಲಿ ಪೋಸ್ಟ್ ಮಾಡಲು ಖಾತೆಯನ್ನು ತೆರೆದಾಗ, ನಿಯಮ ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ಎಕ್ಸ್‌ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ತೋರಿಸಿರುವುದಾಗಿ ವರದಿಯಾಗಿದೆ.

ಇಸ್ರೇಲ್ ಶನಿವಾರ ಟೆಹ್ರಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮಿಲಿಟರಿ ತಾಣಗಳನ್ನು ಗುರಿಯಾಗಿಟ್ಟುಕೊಂಡು ವೈಮಾನಿಕ ದಾಳಿ ನಡೆಸಿತ್ತು. ಇದರ ಪರಿಣಾಮವಾಗಿ ನಾಲ್ವರು ಇರಾನ್ ಸೈನಿಕರು ಸಾವನ್ನಪ್ಪಿದ್ದರು. ಇದು ಇಸ್ರೇಲ್‌ನ ಮೇಲೆ ಇರಾನ್‌ ಇತ್ತೀಚಿಗೆ ನಡೆಸಿದ್ದ ರಾಕೆಟ್‌ ದಾಳಿಗೆ ಪ್ರತಿಕ್ರಿಯೆಯಾಗಿದೆ ಎಂದು ಇಸ್ರೇಲ್‌ ಹೇಳಿಕೊಂಡಿದೆ. ಇದನ್ನೂ ಓದಿ: ಇಸ್ರೇಲ್‌ಗೆ ನಮ್ಮ ಶಕ್ತಿ ಏನೆಂದು ತೋರಿಸಬೇಕು: ಮತ್ತೆ ಯುದ್ಧದ ಎಚ್ಚರಿಕೆ ನೀಡಿದ ಇರಾನ್‌ ಸುಪ್ರೀಂ ಲೀಡರ್‌

Share This Article