ಝಿಕಾ ಆತಂಕ – ಕಾಂಡೋಮ್ ಜಾಗೃತಿ ಬಳಿಕ ಗರ್ಭಿಣಿಯರ ಮೇಲೆ ತೀವ್ರ ನಿಗಾ

Public TV
2 Min Read

ರಾಯಚೂರು: ಜಿಲ್ಲೆಯಲ್ಲಿ ಝಿಕಾ ವೈರಸ್ (Zika Virus) ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಚಿವ ಶಂಕರ್ ಪಾಟೀಲ್ ಬಿ.ಮುನೇನಕೊಪ್ಪ (Shankar Patil Munenakoppa) ರಾಯಚೂರಿನಲ್ಲಿಂದು (Raichur) ಕೇಂದ್ರ, ರಾಜ್ಯ ತಜ್ಞರ ತಂಡ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಸಚಿವ ಶಂಕರ್ ಪಾಟೀಲ್ ಬಿ.ಮುನೇನಕೊಪ್ಪ, ಪ್ರಕರಣ ಪತ್ತೆಯಾದ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 151 ಗರ್ಭಿಣಿಯರ (Pregnant Women) ಮೇಲೆ ನಿಗಾ ಇಡಲಾಗಿದೆ. 21 ಗರ್ಭಿಣಿಯರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವೈರಸ್ ಪತ್ತೆಯಾದ ತಾಲೂಕಿನ 57 ಗರ್ಭಿಣಿಯರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಸಂಗ್ರಹಿಸಿದ ನೀರನ್ನು ಹೆಚ್ಚುದಿನ ಇಡದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳಿಗೆ ಸಹಾಯ ಮಾಡಲು ಸಿದ್ಧ, ಸದ್ಯಕ್ಕೆ ಅಲ್ಲಿ ಅವಶ್ಯಕತೆ ಇಲ್ಲ: ನಟ ವಿಶಾಲ್

ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ನಿರ್ಲಕ್ಷ್ಯ ವಹಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿಂದೆ ಜಿಲ್ಲೆಯಲ್ಲಿ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳನ್ನ ವಜಾ ಮಾಡಲಾಗಿತ್ತು. ಈಗಲೂ ಅಮಾನತು ಬದಲು ವಜಾ ಮಾಡುವ ಎಚ್ಚರಿಕೆ ನೀಡಲಾಗಿದೆ. ಎಲ್ಲಾ ರೀತಿಯ ಅಧಿಕಾರವನ್ನ ಜಿಲ್ಲಾಧಿಕಾರಿಗೆ ನೀಡಿದ್ದೇವೆ. ಅಧಿಕಾರಿಗಳನ್ನ ಬಳಸಿಕೊಂಡು ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಲಿ. ನಾವೂ ನಿರಂತರವಾಗಿ ಸಭೆ ಮಾಡಿ, ಸೂಚನೆ ನೀಡುತ್ತಿದ್ದೇವೆ. ರೋಗ, ಸೊಳ್ಳೆಗಳು ಉಲ್ಬಣಗೊಳ್ಳದಂತೆ ಕ್ರಮ ಕೈಗೊಳ್ಳಲಾಗಿದೆ ಅಂತ ಸಚಿವ ಶಂಕರ್ ಪಾಟೀಲ್ ಬಿ. ಮುನೇನಕೊಪ್ಪ ಹೇಳಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ – ದಂಪತಿಗೆ ಕಾಂಡೋಮ್ ನೀಡಿ ಜಾಗೃತಿ

ರಾಯಚೂರಿನ ಮಾನ್ವಿಯ ಕೋಳಿ ಕ್ಯಾಂಪ್‌ನ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದು ರಾಜ್ಯದ ಮೊದಲ ಪ್ರಕರಣವಾಗಿರುವುದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದು ಗರ್ಭಿಣಿಯರ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ದಂಪತಿಗಳಿಗೆ ಕಾಂಡೋಮ್ (Condom) ನೀಡಿ ಜಾಗೃತಿ ಮೂಡಿಸಲಾಗಿತ್ತು. ಇದೀಗ ತೀವ್ರ ನಿಗಾವಹಿಸಿದ್ದು, ಮಾದರಿ ಸಂಗ್ರಹಗಳನ್ನು ಪ್ರಯೋಗಾಲಕ್ಕೆ ಪರೀಕ್ಷೆಗೆ ಕಳುಹಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *