ಜೀರೋ ಮೇಕಪ್‍ನಲ್ಲಿ ಸಹಜ ಸುಂದರಿ ‘ಸ್ತ್ರೀ’ ಪಲ್ಲವಿ..!

Public TV
3 Min Read

ಬೆಂಗಳೂರು: ಫೋಟೋಶೂಟ್ ಅಂದ್ರೆ ಇತ್ತೀಚಿನ ದಿನಗಳಲ್ಲಿ ಮಣಭಾರದ ಮೇಕಪ್ ಹಾಕಿಕೊಂಡು ಮಾಡ್ಬೇಕು ಅನ್ನೋ ಭಾವನೆ ಎಲ್ಲರದು. ಇದರ ನಡುವೆಯೇ ಕೆಲವರು ತೀರಾ ವಿಭಿನ್ನವಾಗಿ ನಿಲ್ಲುತ್ತಾರೆ. ಈ ಮೇಕಪ್, ಲಿಪ್‍ಸ್ಟಿಕ್ ಸಹವಾಸ ಇಲ್ಲದೆಯೂ ಫೋಟೋ ಶೂಟ್ ಮಾಡಿಸ್ಕೊಂಡು ನಾವು ಚೆನ್ನಾಗಿ ಕಾಣಿಸ್ಬಹುದು. ನ್ಯಾಚುರಲ್ ಲೈಟಲ್ಲಿ ಬೆಂಗಳೂರಿನ ಕೆಆರ್ ಮಾರ್ಕೆಟ್‍ನಲ್ಲಿ ಮಾಡಿಸಿದ ಈ ಫೋಟೋ ಶೂಟೊಂದು ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಯಾರಪ್ಪಾ ಈ ಸಹಜ ಸುಂದರಿ ಎಂದರೆ, ಈಕೆಯ ಹೆಸರು ಪಲ್ಲವಿ ರಾಜು. ಈಗಾಗಲೇ ಮಂತ್ರಂ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಇನ್ನೊಂದಷ್ಟು ಫಿಲಂಗಳ ಸಾಲು ಸಾಲೇ ಇವರ ಮುಂದಿದೆ.

ಯಾವುದೇ ಕೃತಕತೆಯಿಲ್ಲದ ಸಹಜ ಸುಂದರಿಯಾಗಿ ಕಾಣಿಸಿಕೊಂಡು ಮಾಡಿದ ಫೋಟೋಶೂಟ್‍ಗೆ ಪಲ್ಲವಿ ರಾಜು ಹೆಸರಿಟ್ಟಿದ್ದು ‘ಸ್ತ್ರೀ’. ಈ ಫೋಟೋ ನೋಡಿ ಅವರ ಫ್ರೆಂಡ್ಸ್, ಅಭಿಮಾನಿಗಳು ಯಾವ ಮೂವಿ ಫೋಟೋಶೂಟ್ ಇದು, ‘ಸ್ತ್ರೀ’ ಅನ್ನೋದು ನಿಮ್ಮ ಹೊಸ ಮೂವಿ ಹೆಸರಾ ಎಂದು ಕೇಳ್ತಿದ್ದಾರಂತೆ. ಈ ಫೋಟೋಶೂಟ್ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪಲ್ಲವಿರಾಜು, ನಾನು ಹಿಂದೆ ಗ್ಲಾಮರ್ ಶೂಟ್ ಮಾಡಿದ್ದೆ, ಮಾಡರ್ನ್ ಶೂಟ್ ಮಾಡಿದ್ದೆ. ಆದರೆ ಹಲವಾರು ದಿನಗಳಿಂದ ಜೀರೋ ಮೇಕ್ ಅಪ್ ಶೂಟ್ ಮಾಡ್ಬೇಕು ಎಂಬ ಆಸೆಯಿತ್ತು.

ಇದೇ ವೇಳೆ ಮಡಿಕೇರಿಯಲ್ಲಿ ಯುವತಿಯೊಬ್ಬಳು ಹೇರ್ ಸ್ಟ್ರೇಟನಿಂಗ್ ಮಾಡಿಸಲು ಹೋದ ಬಳಿಕ ಕೂದಲು ಉದುರಲು ಶುರುವಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆಯಿತು. ಇದು ನನ್ನ ಮನಸಿನ ಮೇಲೆ ಪ್ರಭಾವ ಬೀರಿತು. ಹೀಗಾಗಿ ನಾನು ಮೇಕಪ್ ಯಾವುದೂ ಇಲ್ಲದೆಯೂ ನಾವು ಸುಂದರವಾಗಿ ಕಾಣಿಸಬಹುದು. ಮೇಕಪ್ ಇದ್ರೆ ಮಾತ್ರ ಜೀವನವಲ್ಲ. ಅದಿಲ್ಲದೆಯೂ ನಾವು ಸುಂದರವಾಗಿ ಕಾಣಿಸಬಹುದು ಎಂದು ಎಲ್ಲರಿಗೂ ತೋರಿಸಬೇಕಿತ್ತು. ಈ ವೇಳೆ ನನ್ನ ಮನಸಲ್ಲಿ ಬಂದಿದ್ದೇ ‘ಸ್ತ್ರೀ’ ಎಂಬ ಕಾನ್ಸೆಪ್ಟ್.

ಈ ಕಾನ್ಸೆಪ್ಟನ್ನು ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆಹಿಡಿದುಕೊಟ್ಟವರು ಫೋಟೋಗ್ರಾಫರ್ ಸತೀಶ್ ಗೋದಿಕಟ್ಟಿ. ಬೆಂಗಳೂರಿನ ಕೆಆರ್ ಮಾರ್ಕೆಟ್‍ನಲ್ಲಿ ನಾವು 4 ಜನ ಸೇರಿ ಈ ಫೋಟೋಶೂಟ್ ಮುಗಿಸಿದ್ವಿ. ಈ ಫೋಟೋ ನೋಡಿದ ಮೇಲೆ ಸಿನೆಮಾ ಮಾಡಬಹುದು ಎಂಬ ಆಫರ್‍ಗಳೂ ಬಂದಿವೆ. ನಗುವಿನ ಫೋಟೋ ಎಲ್ಲರ ಮನಸೆಳೆದಿದೆ. ಔಟರ್ ಅಪಿಯರೆನ್ಸ್ ಗಿಂತ ಜೀರೋ ಮೇಕಪ್‍ಗೆ ನಾವು ಹೆಚ್ಚು ಆದ್ಯತೆ ನೀಡಿದೆವು. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಫೋಟೋ ಚೆನ್ನಾಗಿ ಬಂದಿದೆ ಎಂದು ಹೇಳಿದರು ಪಲ್ಲವಿ ರಾಜು.

ಪಲ್ಲವಿರಾಜುಗೆ ಚಿತ್ರರಂಗ ಹೊಸದಲ್ಲ. ಈಗಾಗಲೇ ಅವರು ‘ಮಂತ್ರಂ’ ಮೂವಿಯಲ್ಲಿ ನಟಿಸಿದ್ದಾರೆ. ಮೂವಿಯಲ್ಲೂ ನಾನು ರಿಯಾಲಿಟಿ ಹೆಚ್ಚಿರಲು ಟ್ರೈ ಮಾಡ್ತೀನಿ. ಇದುವರೆಗೆ ಕಮರ್ಷಿಯಲ್ ಫಿಲ್ಮ್ ಮಾಡಿಲ್ಲ ಎಂದ ಪಲ್ಲವಿರಾಜು ಈಗ ಫುಲ್ ಬ್ಯುಸಿಯಾಗಿದ್ದಾರೆ. ಇವರ ಅಭಿನಯದ ರವಿ ಹಿಸ್ಟರಿ ಎಂಬ ಸಿನೆಮಾ ಅಕ್ಟೋಬರ್ ಫಸ್ಟ್ ಅಥವಾ ಸೆಕೆಂಡ್ ವೀಕಲ್ಲಿ ರಿಲೀಸ್ ಆಗ್ತಿದೆ. ಈ ಸಿನೆಮಾದಲ್ಲಿ ನಾನು ಪೊಲೀಸ್ ಪಾತ್ರ ಮಾಡ್ತಾ ಇದೀನಿ.

ಇನ್ನೊಂದು ಸಿನೆಮಾ ಸಾಲಿಗ್ರಾಮ ದೀಪಾವಳಿಗೆ ರಿಲೀಸ್ ಆಗುತ್ತಿದೆ. ರಂಗಾಯಣ ರಘು, ಪ್ರಕಾಶ್ ಬೆಳವಾಡಿ, ಪ್ರತಾಪ್ ನಾರಾಯಣ್ ಇರುವ ‘ಉತ್ತಮರು’ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿಕ್ಸನ್ ಎಂಬ ಕನ್ನಡ, ತಮಿಳು ಭಾಷೆಯ ಮೂವಿಯಲ್ಲಿ ಆಕ್ಟ್ ಮಾಡ್ತಿದೀನಿ. ತಮಿಳಲ್ಲಿ ನಿಕ್ಸನ್ ನನ್ನ ಫಸ್ಟ್ ಮೂವಿ. ಇದರ ಸಾಂಗ್ ಶೂಟ್ ಬಾಕಿಯಿದ್ದು, ರಾಜ್ಯದ ಕರಾವಳಿ ಭಾಗದಲ್ಲಿ ಇದರ ಚಿತ್ರೀಕರಣ ನಡೆಯಲಿದೆ. ರತ್ನ ಮಂಜರಿ ಎಂಬ ಮೂವಿ ಕೂಡಾ ಬರ್ತಾ ಇದೆ. ಎನ್‍ಆರ್ ಐ ಕನ್ನಡಿಗರು ಈ ಚಿತ್ರದ ಪವರ್. ಜೊತೆಗೆ ಯುಎಸ್ ಟೆಕ್ನೀಶಿಯನ್ ವರ್ಕ್ ಮಾಡ್ತಿದ್ದಾರೆ ಎಂದರು ಪಲ್ಲವಿ. ಸದ್ಯ ಸಹಜ ಸುಂದರಿಯಾಗಿ ಕಾಣಿಸಿರೋ ಪಲ್ಲವಿರಾಜು ಎಲ್ಲರ ಮನಸೆಳೆದಿರೋದಂತೂ ಸತ್ಯ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *