ಎಲ್ಲರೂ ರಾತ್ರಿ ಕನಸು ಕಂಡ್ರೆ ಕುಮಾರಸ್ವಾಮಿ ಹಗಲುಗನಸು ಕಾಣ್ತಾರೆ: ಹೆಚ್‌ಡಿಕೆಗೆ ಜಮೀರ್ ಟಾಂಗ್‌

1 Min Read

– ಶಾಮನೂರು ನಂತ್ರ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುತ್ತೇವೆ ಅಂದಿದ್ರು

ದಾವಣಗೆರೆ: ಎಲ್ಲರೂ ರಾತ್ರಿ ಕನಸು ಕಂಡ್ರೆ ಕುಮಾರಸ್ವಾಮಿ ಹಗಲುಗನಸು ಕಾಣುತ್ತಾರೆ ಎಂದು ಸಚಿವ ಜಮೀರ್‌ ಅಹ್ಮದ್‌ (Zameer Ahmed )ಹೆಚ್‌ಡಿಕೆಗೆ (H.D Kumaraswamy ) ಟಾಂಗ್‌ ಕೊಟ್ಟಿದ್ದಾರೆ.

ದಾವಣಗೆರೆಯಲ್ಲಿ (Davanagere) ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಮುಂದಿನ 2028ಕ್ಕೆ ನಾನೇ ಸಿಎಂ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. 2013, 2019 ಹಾಗೂ 2023 ರಲ್ಲಿ ನಾವೇ ಬರುತ್ತೇವೆ ಅಂದ್ರು ಬರಲಿಲ್ಲ. ಜೆಡಿಎಸ್‌ನಲ್ಲಿ ಸಿದರಾಮಯ್ಯ ಇದ್ದಾಗ 59 ಸೀಟ್‌ ಗೆದ್ದಿದ್ದರು. ಅದನ್ನು ಕೂಡ ಕುಮಾರಸ್ವಾಮಿ ರೀಚ್ ಆಗಲಿಲ್ಲ. 2023ರ ಚುನಾವಣೆಯಲ್ಲಿ 19ಕ್ಕೆ ಬಂದ್ರು, ಅವರು ಸಿಎಂ ಆಗುವ ಹಗಲುಗನಸು ಕಾಣುತ್ತಾರೆ. ಇದನ್ನೂ ಓದಿ: ಜೆಡಿಎಸ್‌ ಬಿಟ್ಟಿದ್ದು ದ್ರೋಹ ಹೇಗಾಗುತ್ತೆ? ನಾನಿದ್ದಿದ್ರೆ ಇನ್ನೊಂದು ಸೀಟ್ ಜಾಸ್ತಿ ಆಗೋದಷ್ಟೇ: ಶಿವಲಿಂಗೇಗೌಡ

ದೇವೇಗೌಡ್ರು ನೂರು ವರ್ಷ ಅರೋಗ್ಯವಾಗಿ ಇರಲಿ. ನಾನು ಈಗ ಕಾಂಗ್ರೆಸ್‌ನಲ್ಲಿ ಇರಬಹುದು, ಆದರೆ ಅವರು ನನ್ನ ರಾಜಕೀಯ ಗುರುಗಳು. ಇನ್ನೂ, ಪ್ರಾದೇಶಿಕ ಪಕ್ಷಕ್ಕೆ ಅಷ್ಟೋ ಇಷ್ಟೋ ಶಕ್ತಿ ಇದೆ. ಬಿಜೆಪಿ ಸೇರಿ ಅದನ್ನು ಕೂಡ ಕಳ್ಕೊಂಡಿದ್ದಾರೆ. ಬಿಜೆಪಿ ಜೊತೆ ಸೇರಿದ್ರೆ ಏನು ಆಗುತ್ತೆ ಅಂತಾ ಮುಂದೆ ನೋಡೋಣ ಎಂದಿದ್ದಾರೆ.

ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವಿಚಾರವಾಗಿ, ಹಿಂದೆ ಶಾಮನೂರು ಶಿವಶಂಕರಪ್ಪ ಅವರು ನಂದು ಇದು ಕೊನೆಯ ಚುನಾವಣೆ. ನನ್ನ ನಂತ್ರ ಅಲ್ಪಸಂಖ್ಯಾತರೆಗೆ ಟಿಕೆಟ್ ಕೊಡುತ್ತೇವೆ ಅಂದಿದ್ರು. ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬೇಕು ಅಂತ ಬೇಡಿಕೆ ಇದೆ. ನಾನು ವರದಿಯನ್ನು ಹೈಕಮಾಂಡ್‌ಗೆ ಕೊಡುತ್ತೇನೆ. ಎಲ್ಲಾ ತಿರ್ಮಾನ ಮಾಡೋ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ SIR ಜಾರಿಗೊಳಿಸಿ, ಅಕ್ರಮ ಬಾಂಗ್ಲಾ ವಲಸಿಗರನ್ನು ಗಡೀಪಾರು ಮಾಡಿ – ಕೇಂದ್ರ ಗೃಹ ಸಚಿವರಿಗೆ ಯತ್ನಾಳ್ ಪತ್ರ

Share This Article