ಇನ್ಮುಂದೆ ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ 50 ಸಾವಿರ ರೂ. ಗಿಫ್ಟ್‌ – ಜಮೀರ್ ಅಹ್ಮದ್

Public TV
2 Min Read

– ರಾಜ್ಯದ 2 ಸಾವಿರ ಮದರಸಾಗಳಲ್ಲಿ ಕನ್ನಡ ಕಲಿಕೆ

ಬೆಂಗಳೂರು: ಇನ್ಮುಂದೆ ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ 50,000 ರೂಪಾಯಿ ಸಹಾಯಧನ ಕೊಡ್ತೇವೆ ಅಂತ ಸಚಿವ ಜಮೀರ್‌ ಅಹ್ಮದ್‌ (Zameer Ahmed Khan) ತಿಳಿಸಿದರು.

ಬೆಂಗಳೂರಿನಲ್ಲಿಂದು (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ 50 ಸಾವಿರ ಕೊಡುತ್ತೇವೆ. ಸಿಎಂ ಸಿದ್ದರಾಮಯ್ಯ (Siddaramaiah) ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು, ಅದು ಆದೇಶ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಭಾರತ ಕೊಟ್ಟ ತಿರುಗೇಟಿಗೆ ಸರಿಯಾಗಿ ಉತ್ತರ ನೀಡದೇ ನುಣುಚಿದ ಟ್ರಂಪ್‌

ಮುಂದುವರಿದು.. ಮೌಲಾನಾ ಅಬ್ದುಲ್ ಕಲಾಂ ಸ್ಕೂಲ್ ಸೇರಿದಂತೆ ಪ್ರತಿಭಾನ್ವಿತರಿಗೆ ಸಹಾಯ ಮಾಡುತ್ತೇವೆ. ಇಲಾಖೆ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುತ್ತಿದ್ದೇವೆ. 214 ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಲ್ಯಾಪ್ ಟಾಪ್ ಕೊಡುತ್ತಿದ್ದೇನೆ. ಸಾಮೂಹಿಕ ವಿವಾಹ ಮಾಡವುದು ಬಡವರು, ಹೀಗಾಗಿ ಅಲ್ಪಸಂಖ್ಯಾತರಲ್ಲಿ ಸಾಮೂಹಿಕ ವಿವಾಹ ಮಾಡುವವರಿಗೂ ಸಹಾಯ ಮಾಡುತ್ತೇವೆ ಎಂದು ತಿಳಿಸಿ ಸಹಾಯ ಮಾಡುತ್ತೇವೆಂದು ಮಾಹಿತಿ ನೀಡಿದರು. ಇದನ್ನೂ ಓದಿ: ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗೆ ಸಂಬಂಧವನ್ನ ಹದಗೆಡಿಸಬೇಡಿ – ಟ್ರಂಪ್‌ಗೆ ತಿವಿದ ನಿಕ್ಕಿ ಹ್ಯಾಲಿ

ಮದರಸಾದಿಂದ 200 ಜನರ ಆಯ್ಕೆ
ಇನ್ನೂ ಮದರಸಾಗಳಲ್ಲಿ ಕನ್ನಡ ಕಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಸೀದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲ್ವಿಗಳಿಗೂ ಕನ್ನಡ ಬೋಧನೆಯನ್ನ ಮಾಡಲಾಗುವುದು. ಮದರಸಾಗಳಿಂದ 200 ಜನರನ್ನ ಆಯ್ಕೆ ಮಾಡಿದ್ದೇವೆ. 3 ತಿಂಗಳ ಒಳಗೆ ಅವರಿಗೆ ಕನ್ನಡ ಕಲಿಸುತ್ತೇವೆ. ಕನ್ನಡ ರಾಜ್ಯ ನಮ್ಮದು ಕನ್ನಡ ಬರಬೇಕು, ಎಲ್ಲ ಮಸೀದಿ ಗುರುಗಳಿಗೂ ಕನ್ನಡ ಕಲಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮನಗರ | ಇನ್‌ಸ್ಟಾದಲ್ಲಿ ಪರಿಚಯವಾದ ಅಪ್ರಾಪ್ತೆಯನ್ನ ಗರ್ಭಿಣಿ ಮಾಡಿದ್ದ ಕಾಮುಕ ಅರೆಸ್ಟ್‌

2 ಸಾವಿರ ಮದರಸಾಗಳಲ್ಲಿ ಕನ್ನಡ ಕಲಿಕೆ
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿರುವ 2 ಸಾವಿರ ಮದರಸಾಗಳಲ್ಲಿ ಕನ್ನಡ ಕಲಿಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಇದಕ್ಕೆ ಅಲ್ಪಸಂಖ್ಯಾತರ ಆಯೋಗ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸೋಮವಾರ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು. ನಿಸಾರ್‌ ಅಹಮದ್‌ ಹೇಳಿದರು. ಅಲ್ಲದೇ, ಈ ಕುರಿತಾದ ಪಠ್ಯಕ್ರಮವನ್ನ ಅಲ್ಪಸಂಖ್ಯಾತರ ಆಯೋಗವು ಪ್ರಾಧಿಕಾರದ ಸಲಹೆಯಂತೆ ಮುದ್ರಿಸಲು ಕ್ರಮವಹಿಸಲಿದೆ ಎಂದರು.

Share This Article