ನೀವು ಲೆಜೆಂಡರಿ ನಾಯಕ: ಕೊಹ್ಲಿಗೆ‌ ಭಾವುಕ ಪತ್ರ ಬರೆದು ಗೋಲ್ಡನ್ ಶೂ ಗಿಫ್ಟ್‌ ಕೊಟ್ಟ ಯುವರಾಜ್‌ ಸಿಂಗ್

Public TV
1 Min Read

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಎಲ್ಲಾ ಮಾದರಿಯ ನಾಯಕತ್ವಕ್ಕೆ ನಿವೃತ್ತಿ ಹೇಳಿರುವ ವಿರಾಟ್‌ ಕೊಹ್ಲಿಗೆ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಹೃದಯಪೂರ್ವಕ ಪತ್ರವೊಂದನ್ನು ಬರೆದಿದ್ದಾರೆ. ಕೊಹ್ಲಿ ಬದ್ಧತೆ ಮತ್ತು ಶಿಸ್ತು ಕುರಿತು ಪತ್ರದಲ್ಲಿ ಹೊಗಳಿಸಿದ್ದಾರೆ.

ಯುವಿ ಪತ್ರದಲ್ಲೇನಿದೆ?
ವಿರಾಟ್, ನೀವು ಒಬ್ಬ ಕ್ರಿಕೆಟಿಗನಾಗಿ ಮತ್ತು ವ್ಯಕ್ತಿಯಾಗಿ ಬೆಳೆಯುತ್ತಿರುವುದನ್ನು ನಾನು ನೋಡಿದ್ದೇನೆ. ಭಾರತೀಯ ಕ್ರಿಕೆಟ್‌ನ ದಿಗ್ಗಜರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆದಿದ್ದೀರಿ. ನೀವು ಹೊಸ ಪೀಳಿಗೆಗೆ ದಾರಿ ಮಾಡಿಕೊಡುವ ದಂತಕಥೆಯಾಗಿದ್ದೀರಿ. ನೆಟ್ಸ್‌ನಲ್ಲಿ ನಿಮ್ಮ ಶಿಸ್ತು, ಮೈದಾನದಲ್ಲಿನ ಉತ್ಸಾಹ ಮತ್ತು ಕ್ರೀಡೆಯಲ್ಲಿನ ಸಮರ್ಪಣೆ ಈ ದೇಶದ ಪ್ರತಿ ಮಕ್ಕಳೂ ಕ್ರಿಕೆಟ್‌ ಬಗ್ಗೆ ಉತ್ಸಾಹ ಹೊಂದಲು ಕಾರಣವಾಗಿದೆ. ಮುಂದೊಂದು ದಿನ ಪ್ರತಿಯೊಬ್ಬರಲ್ಲೂ ನೀಲಿ ಜೆರ್ಸಿಯನ್ನು ಹಾಕುವ ಕನಸನ್ನು ಪ್ರೇರೇಪಿಸುತ್ತದೆ.‌ ಇದನ್ನೂ ಓದಿ: ವೃದ್ಧಿಮಾನ್‌ ಸಹಾ ಹೇಳಿಕೆಯಿಂದ ಬೇಸರವಾಗಿಲ್ಲ: ದ್ರಾವಿಡ್‌

ನೀವು ಪ್ರತಿ ವರ್ಷವೂ ನಿಮ್ಮ ಕ್ರಿಕೆಟ್ ಆಟದ ಸಾಮರ್ಥ್ಯವನ್ನು ಹೆಚ್ಚಿಸಿದ್ದೀರಿ. ಈ ಅದ್ಭುತ ಆಟದಲ್ಲಿ ಈಗಾಗಲೇ ಸಾಕಷ್ಟು ಸಾಧಿಸಿದ್ದೀರಿ. ನೀವೊಬ್ಬ ದಿಗ್ಗಜ ನಾಯಕ, ಅದ್ಭುತ ಆಟಗಾರ. ನೀವೊಬ್ಬ ಸೂಪರ್‌ಸ್ಟಾರ್.‌ ನಿಮಗಾಗಿ ಈ ವಿಶೇಷ ಚಿನ್ನದ ಬೂಟ್‌ಗಳನ್ನು ನೀಡುತ್ತಿದ್ದೇನೆ. ದೇಶ ಹೆಮ್ಮೆ ಪಡುವಂತೆ ಆಡುತ್ತಿರಿ ಎಂದು ಕೊಹ್ಲಿಗೆ ಯುವರಾಜ್‌ ಸಿಂಗ್‌ ಹಾರೈಸಿ ಪತ್ರ ಬರೆದಿದ್ದಾರೆ.

 

View this post on Instagram

 

A post shared by Yuvraj Singh (@yuvisofficial)

ಪತ್ರದ ಜೊತೆಗೆ ಪೂಮಾ ಬ್ರ್ಯಾಂಡ್‌ನ ಚಿನ್ನದ ಶೂಗಳನ್ನು ವಿರಾಟ್‌ ಕೊಹ್ಲಿಗೆ ಯುವರಾಜ್‌ ಸಿಂಗ್‌ ಉಡುಗೊರೆ ನೀಡಿದ್ದಾರೆ. ಅದರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಶಿಖರ್ ಧವನ್

Share This Article
Leave a Comment

Leave a Reply

Your email address will not be published. Required fields are marked *