ಕಾರು ಅಪಘಾತದ ಬಳಿಕ ಮೊದಲ ಬಾರಿಗೆ ಪಂತ್‌ ಭೇಟಿಯಾದ ಯುವರಾಜ್‌ ಸಿಂಗ್‌

Public TV
2 Min Read

ಮುಂಬೈ: ಟೀಂ ಇಂಡಿಯಾ (Team India) ಸ್ಟಾರ್‌ ಕ್ರಿಕೆಟಿಗ ರಿಷಭ್‌ ಪಂತ್‌ (Rishabh Pant) ಭೀಕರ ಕಾರು ಅಪಘಾತದಲ್ಲಿ (Car Accident) ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ‌ ವಿವಿಧ ರೀತಿಯ ಆರೋಗ್ಯ ತರಬೇತಿ ಪಡೆಯುವ ಮೂಲಕ ಚೇತರಿಸಿಕೊಳ್ಳುತ್ತಿದ್ದಾರೆ. ವರ್ಷಾಂತ್ಯದ ವೇಳೆಗೆ ಪಂತ್‌ ಸಂಪೂರ್ಣ ಗುಣಮುಖರಾಗಿ ಫಿಟ್‌ನೆಸ್ ಸಾಬೀತುಪಡಿಸಿದರೆ ಐಸಿಸಿ ಏಕದಿನ ವಿಶ್ವಕಪ್‌ಗೆ (ICC ODI WorldCup) ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಈ ನಡುವೆ ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌‌ (Yuvraj Singh) ಕಾರು ಅಪಘಾತದ ಬಳಿಕ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಪಂತ್‌ ಅವರನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅವರ ಜೊತೆಗಿನ ಫೋಟೋವನ್ನ ತಮ್ಮ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಿಮ್ಮಿಂಗ್ ಪೂಲ್‌ನಲ್ಲಿ ವಾಕ್ ಮಾಡಿದ ಪಂತ್ – ಬೇಗ ಗುಣಮುಖರಾಗಿ ಅಂದ್ರು ಫ್ಯಾನ್ಸ್

ಯುವರಾಜ್ ಸಿಂಗ್ ಅವರು ಫೋಟೋಗೆ ಶೀರ್ಷಿಕೆಯೊಂದನ್ನ ನೀಡಿದ್ದು, ʻಮಗುವಿನ ಹೆಜ್ಜೆ ಹಾಕುತ್ತಿದ್ದಾನೆ. ಈ ಚಾಂಪಿಯನ್ ಮತ್ತೆ ಪುಟಿದೇಳಲಿದ್ದಾನೆ. ಅವನು ಧನಾತ್ಮಕವಾಗಿದ್ದಾನೆ, ಮುಖದಲ್ಲಿ ನಗು ಮೂಡಿದೆ. ಈತ ಯಾವಾಗಲೂ ತಮಾಷೆ ಮಾಡುತ್ತಿರುತ್ತಾನೆ. ನಿಮಗೆ ಹೆಚ್ಚಿನ ಶಕ್ತಿ ಲಭಿಸಲಿʼ ಎಂದು ಬರೆದುಕೊಂಡಿದ್ದಾರೆ. ರಿಷಭ್‌ ಪಂತ್‌ ಇದರಿಂದ ಮತ್ತಷ್ಟು ಉತ್ಸಾಹಗೊಂಡಿದ್ದು, ಯುವಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪೂಜಾರ ಸ್ಪಿನ್ ಬೌಲಿಂಗ್‌ಗೆ ಶಾಕ್ – ನಾನಿನ್ನು ಕೆಲಸ ಬಿಟ್ಟುಬಿಡಲಾ ಎಂದ ಅಶ್ವಿನ್

Rishabh Pant 3

ಯುವರಾಜ್ ಸಿಂಗ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವಾಗಲೇ ಕ್ಯಾನ್ಸರ್‌ಗೆ ತುತ್ತಾಗಿ ವೃತ್ತಿಜೀವನದ ಅತ್ಯಮೂಲ್ಯ ಸಮಯ ಕಳೆದುಕೊಂಡರು. ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಶೀಘ್ರವೇ ಪುನರಾಗಮನ ಮಾಡಿ 2018ರವರೆಗೆ ಭಾರತ ತಂಡಕ್ಕಾಗಿ ಆಡಿದರು. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವು ಐಪಿಎಲ್ ಪ್ರಶಸ್ತಿ ಗೆದ್ದಾಗ ಯುವರಾಜ್‌ ಸಿಂಗ್‌ ಸಹ ತಂಡದಲ್ಲಿದ್ದರು.

ಪಂತ್‌ಗೆ ಏನಾಗಿತ್ತು?
2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ದೆಹಲಿಯಿಂದ ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ರಿಷಭ್ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *