ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತೆ: ಯುವ

Public TV
1 Min Read

ಗುಮುಖದ ರಾಜಕುಮಾರ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಇಂದು (ಮಾ.17) 50ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆ ಚಿಕ್ಕಪ್ಪನ ಸ್ಮಾರಕಕ್ಕೆ ಯುವ ರಾಜ್‌ಕುಮಾರ್ ಪೂಜೆ ಸಲ್ಲಿಸಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯಿ ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತದೆ ಎಂದು ಯುವ (Yuva Rajkumar) ಮಾತನಾಡಿದ್ದಾರೆ. ಇದನ್ನೂ ಓದಿ:‘ಅಪ್ಪು’ ಸಿನಿಮಾ ವೀಕ್ಷಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಮಾಧ್ಯಮಕ್ಕೆ ಮಾತನಾಡಿದ ಯುವ, ಮೊದಲಿಗೆ ನಮ್ಮ ಚಿಕ್ಕಪ್ಪನಿಗೆ 50ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. ಬೆಳಗ್ಗೆ 6 ಗಂಟೆಯಿಂದಲೇ ಕಂಠೀರವ ಸ್ಟುಡಿಯೋದಲ್ಲಿನ ಸ್ಮಾರಕದ ಬಳಿ ಜನ ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೆಲ್ಲ ನೋಡಿದ್ರೆ ಚಿಕ್ಕಪ್ಪ ಇಲ್ಲೇ ನಮ್ಮ ಜೊತೆನೇ ಇದ್ದಾರೆ ಅನಿಸುತ್ತದೆ. ‘ಅಪ್ಪು’ ಸಿನಿಮಾ ರೀ-ರಿಲೀಸ್ ಆದಾಗಲೂ ಅಭಿಮಾನಿಗಳು ಹೊಸ ಸಿನಿಮಾ ರಿಲೀಸ್ ಆದಂತೆ ಬಂದು ನೋಡಿದ್ರು. ಅಪ್ಪು ರೀ-ರಿಲೀಸ್‌ನಲ್ಲೂ ಅಷ್ಟೇ ಪವರ್, ಎನರ್ಜಿ, ಸೆಲೆಬ್ರೇಷನ್ ಇತ್ತು ಎಂದಿದ್ದಾರೆ.

ಅವರ ಹೆಸರಲ್ಲಿ ಪ್ರತಿ ವರ್ಷ ಅಭಿಮಾನಿಗಳು ಅನ್ನದಾನ, ರಕ್ತದಾನ, ಶಿಬಿರಗಳನ್ನ ಮಾಡ್ತಿದ್ದಾರೆ. ಇದನ್ನೆಲ್ಲಾ ನೋಡಿದಾಗ ಖುಷಿಯಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ:ಹನಿಮೂನ್ ಮೂಡ್‌ನಲ್ಲಿ ಲವ್ ಬರ್ಡ್ಸ್- ನಾಗಚೈತನ್ಯ ಜೊತೆ ಶೋಭಿತಾ ಜಾಲಿ ರೈಡ್

ಇನ್ನೂ ಅಭಿಮಾನಿಗಳ ಆರಾಧ್ಯ ಪುನೀತ್ 50ನೇ ಹುಟ್ಟುಹಬ್ಬದ ಹಿನ್ನೆಲೆ ಅಪ್ಪು ಸ್ಮಾರಕಕ್ಕೆ ಜನಸಾಗರದಂತೆ ಫ್ಯಾನ್ಸ್ ಬರುತ್ತಿದ್ದಾರೆ. ನಮ್ಮೊಡನೆ ಇಲ್ಲ ಎಂಬ ಕಹಿ ಸತ್ಯ ಗೊತ್ತಿದ್ದರೂ ಅಪ್ಪು ಮೇಲಿನ ಪ್ರೀತಿ ಫ್ಯಾನ್ಸ್‌ಗೆ ಕಿಂಚಿತ್ತೂ ಕಮ್ಮಿಯಾಗಿಲ್ಲ.

Share This Article