ಪರಭಾಷೆಯಲ್ಲೂ ‘ಯುವ’ನ ಮೆರವಣಿಗೆ- ಬಹುಭಾಷೆಗಳಲ್ಲಿ ಸಿನಿಮಾ ಡಬ್

Public TV
1 Min Read

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ (Yuva Film) ಸಿನಿಮಾ ಚಿತ್ರಮಂದಿರದಲ್ಲಿ 25 ದಿನಗಳು ಪೂರೈಸಿದ ಬೆನ್ನಲ್ಲೇ ಫ್ಯಾನ್ಸ್‌ಗೆ ಇದೀಗ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ. ಈ ಮೂಲಕ ಸೌತ್‌ನತ್ತ ಯುವರಾಜ್‌ಕುಮಾರ್ (Yuva Rajkumar) ಮೆರವಣಿಗೆ ಶುರುವಾಗಿದೆ.

ಕಾಲೇಜು ಹುಡುಗನ ಪಾತ್ರದಲ್ಲಿ ಯುವರಾಜ್‌ಕುಮಾರ್ ನಟಿಸಿದ್ದಾರೆ. ಯುವರಾಜ್‌ಕುಮಾರ್‌ಗೆ ನಾಯಕಿಯಾಗಿ ಸಪ್ತಮಿ ಗೌಡ (Sapthami Gowda) ಬಣ್ಣ ಹಚ್ಚಿದ್ದಾರೆ. ಸಂತೋಷ್ ಆನಂದ್ ರಾಮ್ (Santhosh Anandram) ನಿರ್ದೇಶನ ಮಾಡಿದ್ದಾರೆ. ಮೊದಲ ಸಿನಿಮಾದಲ್ಲೇ ಯುವರಾಜ್‌ಕುಮಾರ್ ‘ಯುವ‌’ ಚಿತ್ರದಿಂದ ಪ್ರೇಕ್ಷಕರ ಸೆಳೆದಿದ್ದಾರೆ. ಇದನ್ನೂ ಓದಿ:ಕನ್ನಡ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

ಇದೀಗ ಒಟಿಟಿಗೆ ಲಗ್ಗೆ ಇಟ್ಟಿರುವ ‘ಯುವ’ ಸಿನಿಮಾ ತೆಲುಗು, ತಮಿಳು, ಹಿಂದಿ ಭಾಷೆಯಲ್ಲೂ ಡಬ್ ಆಗಿದೆ. ಈ ಮೂಲಕ ಪರಭಾಷೆಯಲ್ಲೂ ಯುವ ಅಬ್ಬರ ಶುರುವಾಗಿದೆ. ಅಂದಹಾಗೆ, ಕಾಂತಾರ, ಕೆಜಿಎಫ್, ಸಲಾರ್ ಸಿನಿಮಾಗಳನ್ನು ನಿರ್ಮಿಸಿದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ ಯುವ ಚಿತ್ರವನ್ನು ನಿರ್ಮಾಣ ಮಾಡಿದೆ.

Share This Article