Breaking: ಯುವ ರಾಜ್‌ಕುಮಾರ್‌ಗೆ ನಾಯಕಿಯಾದ `ಕಾಂತಾರ’ ಬ್ಯೂಟಿ ಸಪ್ತಮಿ

Public TV
1 Min Read

ದೊಡ್ಮನೆ ಕುಡಿ ಯುವರಾಜ್‌ಕುಮಾರ್ `ಯುವ’ (Yuva Film) ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೇ `ಯುವ’ ಚಿತ್ರದ ಮುಹೂರ್ತ ಅದ್ದೂರಿಯಾಗಿ ಮಾಡಲಾಯಿತು. ಟೈಟಲ್ ಅನಾವರಣ ಮಾಡುವ ಮೂಲಕ ದೂಳೆಬ್ಬಿಸಿದ್ದಾಯ್ತು. ಈಗ ಯುವಗೆ ಜೋಡಿಯಾಗಿ ಬರುವ ನಾಯಕಿ (Heroine) ಬಗ್ಗೆ ಬಿಗ್ ಅಪ್‌ಡೇಟ್ ನೀಡಲಿದೆ‌ ಎಂದು ಹೊಂಬಾಳೆ ಸಂಸ್ಥೆ (Hombale Films) ತಿಳಿಸಿದೆ.

`ಯುವ’ ಸಿನಿಮಾ ಶುರುವಾಗುವ ಮುಂಚೆಯೇ ಯುವ ರಾಜ್‌ಕುಮಾರ್‌ಗೆ ಯಾರು ನಾಯಕಿಯಾಗಿ ಬರುತ್ತಾರೆ ಎಂದು ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಇದೀಗ ಯುವಗೆ ನಾಯಕಿಯಾಗುವ ಲಕ್ಕಿ ನಟಿ ಯಾರು ಎಂಬುದಕ್ಕೆ ಉತ್ತರ ಸಿಕ್ಕಿದೆ.

ದೊಡ್ಮನೆ ಕುಡಿ ಯುವಗೆ ನಾಯಕಿಯಾಗಿ `ಕಾಂತಾರ’ (Kantara) ಬ್ಯೂಟಿ ಸಪ್ತಮಿ ಗೌಡ (Saptami Gowda) ಕಾಣಿಸಿಕೊಳ್ಳಲಿದ್ದಾರೆ. ಯುವ ಜೊತೆ ರೊಮ್ಯಾನ್ಸ್ ಮಾಡಲು ಸಪ್ತಮಿ ರೆಡಿಯಾಗಿದ್ದಾರೆ. ಚಿತ್ರದಲ್ಲಿ ಸಪ್ತಮಿ ಪಾತ್ರಕ್ಕೆ ಹೆಚ್ಚಿನ ಆದ್ಯತೆಯಿದ್ದು, ಪವರ್‌ಫುಲ್ ಪಾತ್ರದ ಮೂಲಕ ನಟಿ ಬಿಗ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವ-ಸಪ್ತಮಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಬರ್ತ್‌ಡೇ ಬಗ್ಗೆ ಅಪ್‌ಡೇಟ್ ನೀಡಿದ ರಾಧಿಕಾ ಪಂಡಿತ್

`ಯುವ’ ಸಿನಿಮಾವನ್ನ ಸಂತೋಷ್ ಆನಂದ್‌ರಾಮ್ ನಿರ್ದೇಶನ ಮಾಡಿದ್ದರೆ, ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ವರ್ಷ ಡಿಸೆಂಬರ್ 22ಕ್ಕೆ ʻಯುವʼ ಚಿತ್ರ ತೆರೆಗೆ ಅಬ್ಬರಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *