‘ಒಬ್ಬನೇ ಶಿವ ಒಬ್ಬನೇ ಯುವ’ ಎಂದು ರಗಡ್ ಆಗಿ ಎಂಟ್ರಿ ಕೊಟ್ಟ ದೊಡ್ಮನೆ ಮಗ

Public TV
2 Min Read

ಯುವ ಅಶ್ವಮೇಧಯಾಗಕ್ಕೆ ಸಜ್ಜಾಗಿದ್ದಾರೆ. ಕುದುರೆ ಏರಿ ಯುದ್ಧಕ್ಕೆ ಹೊರಡಲಿದ್ದಾರೆ. ಅದಕ್ಕೂ ಮುನ್ನ ಕರುನಾಡಿನ ಮುಂದೆ ಮಂಡಿ ಊರಿದ್ದಾರೆ. ನನ್ನನ್ನು ಹರಸಿ ಬೆಳೆಸಿ ಎಂದು ಕೇಳಿಕೊಂಡಿದ್ದಾರೆ. ಅ ಕಾರಣಕ್ಕಾಗಿಯೇ ಯುವ ಸಿನಿಮಾದ ಮೊದಲ ಹಾಡನ್ನು ಜನರ ಮುಂದೆ ಇಟ್ಟಿದ್ದಾರೆ. ಹೇಗಿದೆ ಯುವ (Yuva) ಸಿನಿಮಾದ ಮೊದಲ ಹಾಡು ? ಅಣ್ಣಾವ್ರ ಮೊಮ್ಮಗನ ಚೊಚ್ಚಲ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಇದನ್ನೂ ಓದಿ:ಲೋಕಸಭೆಗೆ ಬಿಜೆಪಿ ಅಭ್ಯರ್ಥಿಗಳ ಫಸ್ಟ್‌ ಲಿಸ್ಟ್‌ ಔಟ್‌ – ಮಥುರಾದಿಂದ ಹೇಮಾ ಮಾಲಿನಿ ಕಣಕ್ಕೆ

ಯುವ ಕಣ್ಣಲ್ಲಿ ಜನರು ಏನು ನೋಡಲು ಕಾಯುತ್ತಿದ್ದರೊ ಅದನ್ನೇ ಯುವ ತೋರಿಸಿದ್ದಾರೆ. ಅಪ್ಪು ಬಿಟ್ಟು ಹೋದ ಸಿಂಹಾಸನದಲ್ಲಿ ನೀನೇ ಕೂಡಬೇಕು ಎಂದು ಹೇಳಿದ್ದಾರೆ. ಅದಕ್ಕೆ ತಕ್ಕಂತಿದೆ ಯುವ ಹಾಡು. ಒಬ್ಬನೇ ಶಿವ ಒಬ್ಬನೇ ಯುವ. ಇದನ್ನು ಕೇಳುತ್ತಾ ಕೇಳುತ್ತಾ ನೀವು ಮೈಮರೆಯುತ್ತೀರಿ. ಎಲ್ಲವನ್ನೂ ಅಲ್ಲಲ್ಲೇ ಬಿಟ್ಟು ಎದ್ದು ನಿಲ್ಲುತ್ತೀರಿ. ಕಾರಣ ಹಾಡು ಹಾಗಿದೆ. ಕರುನಾಡನ್ನು ಹುಚ್ಚೆಬ್ಬಿಸಿದೆ.

 

View this post on Instagram

 

A post shared by Hombale Films (@hombalefilms)

ಅದೇನು ಕುಣಿತ. ಯುವರಾಜ್‌ಕುಮಾರ್ (Yuvarajkumar) ಸುಮ್ಮನೆ ಆಗಿಲ್ಲ. ಸುಮ್ಮನೆ ಬಂದಿಲ್ಲ. ಏನಾದರೂ ಮಾಡಿ ಹೋಗಬೇಕು. ಏನಾದರೂ ಸಾಧಿಸಬೇಕು. ಅದೆಲ್ಲಕ್ಕಿಂತ ಹೆಚ್ಚಾಗಿ ಅಪ್ಪು ಚಿಕ್ಕಪ್ಪ ನನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಉಳಿಸಿಸಕೊಳ್ಳಬೇಕು. ಅದೊಂದೇ ಉದ್ದೇಶ. ಅದೇ ಕಾಯಕ. ಹೀಗಂದುಕೊಂಡು ಯುವ ಬಣ್ಣದಲೋಕಕ್ಕೆ ಕಾಲಿಟ್ಟಿದ್ದಾರೆ. ಯುವ ಹಾಡು ನೋಡಿದ ಜನರು ಕೇಕೆ ಹಾಕುತ್ತಿದ್ದಾರೆ.

ಚಾಮರಾಜನಗರ ಅದು ಅಣ್ಣಾವ್ರು ಹುಟ್ಟಿದ ಮಣ್ಣು. ಅದೇ ಮಣ್ಣಿನಲ್ಲಿ ನಿಂತು ಯುವ ಕರುನಾಡಿಗೆ ತಲೆ ಬಾಗಿದ್ದಾರೆ. ನನ್ನನ್ನು ಹರಸಿ, ಬೆಳೆಸಿ ಎಂದು ಕೇಳಿಕೊಂಡಿದ್ದಾರೆ. ರಾಜ್‌ಕುಮಾರ್ ಮೊಮ್ಮಗ ಎನ್ನುವ ಕಾರಣಕ್ಕೆ ಅಷ್ಟೇ ಅಲ್ಲ. ಅಪ್ಪು ಮಗ ಎನ್ನುವ ಕಾರಣಕ್ಕೂ ಅಲ್ಲ. ಅದೆಲ್ಲ ಮೀರಿದ್ದು ಕಲೆ. ಅದನ್ನು ಯುವ ರಕ್ತದಲ್ಲೇ ಬಸಿದುಕೊಂಡು ಬಂದಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಜಪಾನ್‌ಗೆ ಹೋಗಿದ್ದು ಪುಷ್ಪ 2ಗಾಗಿ ಅಲ್ಲ- ಮತ್ಯಾಕೆ?

ಒಬ್ಬನೇ ಶಿವ ಒಬ್ಬನೇ ಯುವ ಈ ಹಾಡನ್ನು ಸಂತೋಷ್ ಆನಂದ್ ರಾಮ್ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ‘ರಾಜಕುಮಾರ’ ಸಿನಿಮಾದಲ್ಲಿ ಬೊಂಬೆ ಹೇಳುತ್ತೈತೆ ಹಾಡನ್ನು ಬರೆದಿದ್ದು ಇವರೇ. ಅದೇ ಸಂತೋಷ್ ಈಗ ಈ ಗೀತೆಗೆ ಸಾಲು ಹೆಣೆದಿದ್ದಾರೆ. ಒಬ್ಬ ನಯಾ ಹುಡುಗನನ್ನು ಹೇಗೆ ತೆರೆ ಮೇಲೆ ತೋರಿಸಬೇಕೆಂದು ಅವರಿಗೆ ಗೊತ್ತು. ಅದನ್ನು ನಿಯತ್ತಾಗಿ ಪಾಲಿಸಿದ್ದಾರೆ. ಸದ್ಯ ರಿಲೀಸ್ ಆಗಿರೋ ಯುವ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಹಾಡಿಗೆ ಯುವನ ಖದರ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನೇನು ಇದೇ ಮಾ.29ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

Share This Article