ಸನಾತನ ಧರ್ಮ ಅಪಮಾನಿಸುವವರ ವಿರುದ್ಧ ನನ್ನ ಹೋರಾಟ – ಯೂಟ್ಯೂಬರ್‌ ಮನೀಶ್‌ ಕಶ್ಯಪ್‌ ಬಿಜೆಪಿ ಸೇರ್ಪಡೆ

Public TV
1 Min Read

ನವದೆಹಲಿ: ಯೂಟ್ಯೂಬರ್ ಮನೀಶ್ ಕಶ್ಯಪ್ (Manish Kashyap) ಲೋಕಸಭೆ ಚುನಾವಣೆ ಹೊತ್ತಲ್ಲಿ ಬಿಜೆಪಿಗೆ (BJP) ಸೇರ್ಪಡೆಗೊಂಡಿದ್ದಾರೆ. ಸನಾತನ ಧರ್ಮಕ್ಕೆ ಅಪಮಾನ ಮಾಡುವವರ ವಿರುದ್ಧ ನನ್ನ ಹೋರಾಟ ಎಂದು ಹೇಳಿದ್ದಾರೆ.

ನಾವು ನಿನ್ನೆ ಮನೋಜ್ ತಿವಾರಿ ಅವರೊಂದಿಗೆ ಬಿಹಾರದಿಂದ ಬಂದಿದ್ದೇವೆ. ಅವರಿಂದಲೇ ನಾನು ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಯಿತು. ನನ್ನ ಜೀವನದ ಕೆಟ್ಟ ದಿನಗಳು ಕೊನೆಗೊಂಡವು. ಹಾಗಾಗಿ ಬಿಜೆಪಿ ಸೇರಿದ್ದೇನೆ. ನಾವು ಬಿಹಾರವನ್ನು ಬಲಪಡಿಸಬೇಕು. ಲಾಲು ಕುಟುಂಬ ಬಿಹಾರವನ್ನು ಲೂಟಿ ಮಾಡಿ ನಾಶಪಡಿಸಿತು. ನನ್ನ ಹೋರಾಟ ಸನಾತನವನ್ನು ದೂಷಿಸುವವರು ಮತ್ತು ರಾಷ್ಟ್ರೀಯತೆಯ ವಿರುದ್ಧ ಇರುವವರ ವಿರುದ್ಧ ಎಂದು ಮನೀಶ್ ಕಶ್ಯಪ್ ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರಿಂದ ಬಿಜೆಪಿಗೆ ಒಂದೇ ಒಂದು ವೋಟು ಸಹ ಬರಲ್ಲ: ದೀದಿ ಕೆಂಡ

ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾತನಾಡುವ ಮನೀಶ್ ಕಶ್ಯಪ್ ಅವರಂತಹ ವ್ಯಕ್ತಿ ಬಿಜೆಪಿ ಸೇರಿದ್ದಾರೆ. ಮನೀಶ್‌ ಅವರನ್ನು ಮೊದಲಿನಿಂದಲೂ ಬಲ್ಲೆ. ಅವರು ಬಡವರ ಕಲ್ಯಾಣವನ್ನು ಬಯಸುತ್ತಾರೆ. ಅವರು ಬಡವರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿಯವರೊಂದಿಗೆ ಸೇರಿದ್ದಾರೆ ಎಂದು ಮನೋಜ್ ತಿವಾರಿ ಹೇಳಿದ್ದಾರೆ.

ಪಕ್ಷ ಸೇರಿದ ನಂತರ ಕಶ್ಯಪ್‌ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿಯಾದರು. ರಾಷ್ಟ್ರೀಯತೆಗಾಗಿ ಕೆಲಸ ಮಾಡುವುದಾಗಿ ನಡ್ಡಾ ಬಳಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಚುನಾವಣಾ ಅಸ್ತ್ರವಾಗಿ ಆರ್ಟಿಕಲ್ 370

Share This Article