ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

Public TV
1 Min Read

ಶಿವಮೊಗ್ಗ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ. ತೀರ್ಥಹಳ್ಳಿಯ ರಾಮಮಂಟಪದ ಬಳಿ ಈ ಅವಘಡ ಸಂಭವಿಸಿದ್ದು, ಮೃತ ಯುವಕರನ್ನು ವರ್ಧನ್ (19) ಹಾಗೂ ಮಂಜು (20) ಎಂದು ಗುರುತಿಸಲಾಗಿದೆ.

ಇಬ್ಬರು ಯುವಕರು ನದಿಯಲ್ಲಿ ಈಜಲು ತೆರಳಿರುವ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಆದರೆ ವರ್ಧನ್ ಪೋಷಕರು ಹುಡುಕಾಟ ನಡೆಸಿ, ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗ ಪೊಲೀಸರು ವರ್ಧನ್ ಮೊಬೈಲ್ ನೆಟ್‍ವರ್ಕ್ ಲೊಕೇಶನ್ ಆಧರಿಸಿ, ವರ್ಧನ್ ಇರುವ ಸ್ಥಳದ ಮಾಹಿತಿ ಕಂಡು ಹಿಡಿದಿದ್ದಾರೆ. ಇದನ್ನೂ ಓದಿ: ಕೋಡ್ದಬ್ಬು ದೇಗುಲದ ಆಯದಕಲ್ಲಿಗೆ, ಅಂಗಣದ ಸುತ್ತಲೂ ರಕ್ತ ಸುರಿಸಿ ಓಡಾಟ- ವ್ಯಕ್ತಿ ಅರೆಸ್ಟ್

ನಂತರ ತುಂಗಾನದಿ ದಂಡೆಯಲ್ಲಿ ಮೊಬೈಲ್ ಹಾಗೂ ಬಟ್ಟೆ ಇರುವುದನ್ನು ಗಮನಿಸಿದ ಪೊಲೀಸರು, ಅಗ್ನಿ ಶಾಮಕದಳ ಸಿಬ್ಬಂದಿಯವರನ್ನು ಕರೆಸಿ ಇಬ್ಬರ ಶವವನ್ನು ಹೊರಗೆ ತೆಗೆದಿದ್ದಾರೆ. ಘಟನೆ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *