ಶಿವಮೊಗ್ಗ: ರಾತ್ರಿ ಗೆಳೆಯರ ಜೊತೆ ಬಾರಲ್ಲಿ ಮದ್ಯಪಾನ ಮಾಡಿ ಬರುವಷ್ಟರಲ್ಲಿ ಹೊರಗಿದ್ದ ಬೈಕ್ ಗಾಯಬ್ ಆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಬಿಹೆಚ್ ರಸ್ತೆಯಲ್ಲಿರುವ ಬಾರೊಂದರಲ್ಲಿ ವಿನತ್ ತಮ್ಮ ಸ್ನೇಹಿತರ ಜೊತೆ ಕುಡಿಯಲು ಕೂತಿದ್ದರು. ಗುಂಡು ಹಾಕಿಕೊಂಡು ಹೊರ ಬರುವಷ್ಟರಲ್ಲಿ ಅವರ ಆಕ್ಟಿವಾ ಹೊಂಡ ನಾಪತ್ತೆ ಆಗಿತ್ತು. ಬಾರ್ ನ ಸಿಸಿಟಿವಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಯುವಕನೊಬ್ಬ ಬೈಕ್ ಕದ್ದು ಹೋಗಿರುವುದು ಪತ್ತೆಯಾಗಿದೆ.
ಬೈಕ್ ಮೇಲೆ ಕೂತ ಯುವಕ ಮೊದಲು ಒಂದು ಬೈಕ್ ಕೀ ತೆಗೆಯಲು ಯತ್ನಿಸುತ್ತಾನೆ. ಆದು ಸಾಧ್ಯವಾಗದಿದ್ದಾಗ ಇನ್ನೊಂದು ಬೈಕ್ ಕೀ ತೆಗೆದು ಗಾಡಿಯೊಂದಿಗೆ ಪರಾರಿಯಾಗಿದ್ದಾನೆ. ಗುಂಡು ಹಾಕಲು ಹೋಗಿ ಗಾಡಿ ಕಳೆದುಕೊಂಡ ವಿನಯ್ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಪೊಲೀಸರು ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ, ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv