ಬೆಂಗಳೂರು: ಪಾರಿವಾಳ ಕಳವಿಗೆ ಸಂಬಂಧಿಸಿದಂತೆ ಒಂದೇ ಏರಿಯಾದ ಯುವಕರ ನಡುವೆ ಗಲಾಟೆ ನಡೆದು ಒಬ್ಬನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ರಾಜಗೋಪಾಲ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನು ಮಲ್ಲಿಕಾರ್ಜುನ (25) ಎಂದು ಗುರುತಿಸಲಾಗಿದೆ. ಸೂರಿ, ದರ್ಶನ್, ಮಹೇಂದ್ರ ಎಂಬವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಈ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಿರಿಯ ಕಂದಾಯ ಅಧಿಕಾರಿ ಮಗಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ – ಮನೆಗೆಲಸದವನ ಮೇಲೆ ಶಂಕೆ


ಆರೋಪಿಗಳು ಹಾಗೂ ಕೊಲೆಯಾದ ಮಲ್ಲಿಕಾರ್ಜುನ ಎಲ್ಲರೂ ಒಂದೇ ಏರಿಯಾದವರು. ಪಾರಿವಾಳದ ವಿಚಾರಕ್ಕೆ ಮಂಗಳವಾರ (ಏ.21) ರಾತ್ರಿ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಆರೋಪಿಗಳಿಗೆ ಬೆನ್ನಿಗೆ ಚಾಕುವಿನಿಂದ ಇರಿದಿದ್ದರು. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು (ಏ.22) ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದ. ಇದನ್ನೂ ಓದಿ: ಪ್ರೇಮಾ ನಂಬರ್ ಬ್ಲಾಕ್, ಮಾಜಿ ಲವರ್ ಸಂಪರ್ಕದಲ್ಲಿದ್ದ ಕಿರಣ್ – ಬ್ಯಾಡರಹಳ್ಳಿ ಕೇಸ್‌ಗೆ ಹೊಸ ಟ್ವಿಸ್ಟ್


