ರಾಹುಲ್‌ ಗಾಂಧಿ ಜೊತೆ ಯುವಕರು ಸೈನಿಕರಾಗಿ ಕೆಲಸ ಮಾಡಬೇಕು: ಲಕ್ಷ್ಮಿ ಹೆಬ್ಬಾಳ್ಕರ್

Public TV
1 Min Read

ಬೆಳಗಾವಿ: ಯುವಕರು ರಾಹುಲ್ ಗಾಂಧಿಯವರ (Rahul Gandhi) ಜೊತೆ ಸೈನಿಕರಾಗಿ (Soldier) ಕೆಲಸ ಮಾಡಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕರೆ ನೀಡಿದ್ದಾರೆ.

ಬೈಲಹೊಂಗಲ ಪಟ್ಟಣದಲ್ಲಿ ನಡೆದ ಬೆಳಗಾವಿ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ (Youth Congress) ಸಮಿತಿಯಿಂದ ನಡೆದ ಯುವ ಪರ್ವ ಪ್ರತಿಜ್ಞೆ – 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೋರಿಕೆಗೆ ಮಾತ್ರ ದೇಶ ಭಕ್ತಿಯ ಹೆಸರಿನಲ್ಲಿ ಬಿಜೆಪಿ ಯುವಕರನ್ನು ವಂಚಿಸುವ ಕೆಲಸ ಮಾಡುತ್ತಿದೆ. ನಮ್ಮ ನಾಯಕ ರಾಹುಲ್ ಗಾಂಧಿಯವರ ಆದರ್ಶ ಎಲ್ಲಾ ಯುವಕರಿಗೆ ಮಾರ್ಗದರ್ಶಿ ಆಗಬೇಕು ಎಂದು ಹೇಳಿದರು. ಇದನ್ನೂ ಓದಿ: ಪ್ರತಿ ಬುಧವಾರ ವರ್ಕ್ ಫ್ರಂ ಹೋಂ ಕೊಡಿ: ಬೆಂಗಳೂರಿನ ಐಟಿ ಕಂಪನಿಗಳಿಗೆ ಟ್ರಾಫಿಕ್‌ ಪೊಲೀಸರ ಸಲಹೆ

 

ಚುನಾವಣೆ (Election) ಮಾತ್ರ ನಮ್ಮ ರಾಜಕೀಯ ಗುರಿಯಾಗಿರಬಾರದು. ಒಂದು ಗುರಿಯನ್ನು ಇಟ್ಟುಕೊಂಡು ರಾಜಕೀಯಕ್ಕೆ ಬರಬೇಕು. ನಿಮ್ಮ ಊರಿನಲ್ಲಿ ನಿಮ್ಮ ಹಿಡಿತವಿದ್ದರೆ ನಾಯಕರು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

50 ವರ್ಷದಿಂದಲೂ ಆರ್‌ಎಸ್‌ಎಸ್‌ ಕಚೇರಿ ಮುಂದೆ ಭಾರತದ ಧ್ವಜ ಇರಲಿಲ್ಲ. ನಮ್ಮ ದೇಶದ ಮೊದಲ ಬಜೆಟ್ ಮಂಡಿಸಿದ್ದು ಜವಾಹರ್ ಲಾಲ್ ನೆಹರು. ದೇಶದ ಅಭಿವೃದ್ಧಿಗೋಸ್ಕರ ನೆಹರು ಅವರು ಅವರ ಬಂಗಲೆಯನ್ನು ಬಿಟ್ಟು ಕೊಟ್ಟಿದ್ದಾರೆ ಎಂದು ಹಾಡಿ ಹೊಗಳಿದರು.

Share This Article