ಬೆಳಗಾವಿ: ಬೋರವೆಲ್ ಗೆ ನೀರು ತರಲು ಹೋಗಿದ್ದ ಯುವತಿಯನ್ನು ಕಬ್ಬಿನ ತೋಟಕ್ಕೆ ಹೊತ್ತೊಯ್ದು ಅತ್ಯಾಚಾರ ನಡೆಸಿರುವ ಘಟನೆ ಮೇ 25ರಂದು ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆನಂದ್ ಕಾಮಶೆಟ್ಟಿ(19) ಅತ್ಯಾಚಾರ ಎಸಗಿದ ಯುವಕ. ಆನಂದ್ ಬೋರವೆಲ್ ಗೆ ನೀರು ತರಲು ಹೋಗಿದ್ದ ಅದೇ ಗ್ರಾಮದ ಯುವತಿಯನ್ನು ಬಲಾತ್ಕಾರವಾಗಿ ಒಯ್ದು ಅತ್ಯಾಚಾರ ಮಾಡಿದ್ದಾನೆ.
ಇನ್ನೂ ಆರೋಪಿ ಆನಂದ್‍ನನ್ನು ಹುಕ್ಕೇರಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಯುವತಿಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.