ಆನ್‍ಲೈನ್ ಗೇಮ್‍ನಲ್ಲಿ 18 ಲಕ್ಷ ಕಳೆದುಕೊಂಡ ಯುವಕ – ವಿಡಿಯೋ ಮಾಡಿಟ್ಟು ನೇಣಿಗೆ ಶರಣು

Public TV
1 Min Read

ದಾವಣಗೆರೆ: ಆನ್‍ಲೈನ್ ಗೇಮ್‍ನಲ್ಲಿ (Online Game) ಬರೋಬ್ಬರಿ 18 ಲಕ್ಷ ರೂ. ಹಣ ಕಳೆದುಕೊಂಡು ಯುವಕನೊಬ್ಬ ನೇಣಿಗೆ ಶರಣಾದ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.

ಮೃತನನ್ನು ಸರಸ್ವತಿ ನಗರದ ಶಶಿ ಕುಮಾರ್ (25) ಎಂದು ಗುರುತಿಸಲಾಗಿದೆ. ಯುವಕ ಆನ್‍ಲೈನ್ ಗೇಮ್‍ನಲ್ಲಿ 18 ಲಕ್ಷ ರೂ. ಕಳೆದುಕೊಂಡಿದ್ದ. ಇದರಿಂದ ನೊಂದು ಆನ್‍ಲೈನ್ ಗೇಮ್ ನಿಷೇಧಿಸುವಂತೆ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಡಿಸಿ ಹಾಗೂ ಎಸ್ಪಿ ಮುಖಾಂತರ ಮನವಿ ಮಾಡಿಕೊಂಡಿದ್ದ. ದೂರು ನೀಡಿದರು ಯಾವುದೇ ಕ್ರಮವಾಗದ ಹಿನ್ನಲೆ ಸೆಲ್ಫಿ ವಿಡಿಯೋ ಮಾಡಿ ಯುವಕ ನೋವು ತೋಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: RTO ಕಣ್ತಪ್ಪಿಸಿ ಓಡಾಡ್ತಿದ್ದ ಫೆರಾರಿ ಕಾರು ಸೀಜ್‌ – 1.58 ಕೋಟಿ ತೆರಿಗೆ ಕಟ್ಟಲು ಸಂಜೆವರೆಗೆ ಡೆಡ್‌ಲೈನ್‌ ಫಿಕ್ಸ್‌

ಡೆತ್‍ನೋಟ್‍ನಲ್ಲಿ ಗೇಮ್‍ನ ಅಕ್ರಮದ ಬಗ್ಗೆ ಯುವಕ ಅನಾವರಣ ಮಾಡಿದ್ದಾನೆ. ಅದರಲ್ಲಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಪ್ರಸ್ತಾಪ ಮಾಡಿ, ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾನೆ. ನನ್ನಂತೆ ಹಣ ಕಳೆದುಕೊಂಡು ನೋವು ಅನುಭವಿಸುವುದು ಕಡಿಮೆಯಾಗಲಿ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಸ್ಲೋ ಪಾಯ್ಸನ್ ನೀಡಿ ಪತಿಯ ಹತ್ಯೆ ಆರೋಪ – ವಿಡಿಯೋ ಸಾಕ್ಷಿ ಇದ್ರೂ ಪತ್ನಿಯನ್ನು ಬಂಧಿಸದ ಪೊಲೀಸರು

Share This Article