ನಿವೃತ್ತಿ ಹಣ ಕೊಟ್ಟಿಲ್ಲವೆಂದು ಸಹೋದರಿಯರ ಜೊತೆ ಸೇರಿ ಅಪ್ಪನನ್ನೇ ಕೊಂದ!

Public TV
2 Min Read

ಹೈದರಾಬಾದ್: ನಿವೃತ್ತಿ ಹಣ ನೀಡಿಲ್ಲವೆಂದು ರಾಡ್ ನಿಂದ ಹೊಡೆದು ಮಗ ತನ್ನ ಇಬ್ಬರು ಸಹೋದರಿಯರ ಜೊತೆ ಸೇರಿ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.

ಈ ಘಟನೆ ತೆಲಂಗಾಣದ ರಾಚಕೊಂಡ ಪ್ರದೇಶದಲ್ಲಿ ನಡೆದಿದೆ. ಮೃತ ದುರ್ದೈವಿ ತಂದೆಯನ್ನು ಕೃಷ್ಣಾ ಎಂದು ಗುರುತಿಸಲಾಗಿದೆ. ಇವರು ತನ್ನ 22 ವರ್ಷದ ತನ್ನ ಮಗ ತರುಣ್ ಹಾಗೂ ಇಬ್ಬರು ಹೆಣ್ಣು ಮಕ್ಕಳಿಂದಲೇ ಕೊಲೆಗೀಡಾಗಿದ್ದಾರೆ.

ಕೃಷ್ಣ ಅವರು ನೀರು ಸರಬರಾಜು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷ ಜೂನ್ ತಿಂಗಳಲ್ಲಿ ನಿವೃತ್ತಿ ಹೊಂದಿದ್ದರು. ಹೀಗಾಗಿ ಅವರಿಗೆ ಸರ್ಕಾರ 6 ಲಕ್ಷ ನಿವೃತ್ತಿ ಹಣವನ್ನು ನೀಡಿತ್ತು. ಇದರ ಜೊತೆಗೆ ತಮ್ಮ ಹೆಸರಿನಲ್ಲಿದ್ದ ಫ್ಲಾಟ್ 10 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ವಿಚಾರವನ್ನು ತಿಳಿದ ಮಗ ತುರುಣ್ ಆ ಹಣದಲ್ಲಿ ತನಗೆ ಹಾಗೂ ಇಬ್ಬರು ಸಹೋದರಿಯರಿಗೆ ಪಾಲು ನೀಡಬೇಕೆಂದು ತಗಾದೆ ತೆಗೆದಿದ್ದಾನೆ ಅಂತ ವನಸ್ತಲಿಪುರಂನ ಎಸಿಪಿ ನಾರಾಯಣ ಅವರು ಘಟನೆ ಬಗ್ಗೆ ತಿಳಿಸಿದ್ದಾರೆ.

ಮಗನ ಮಾತಿನಂತೆ ಕೃಷ್ಣ ಅವರು ತನ್ನಲ್ಲಿದ್ದ ಹಣದಲ್ಲಿ 2 ಲಕ್ಷ ಉಳಿಸಿಕೊಂಡು ಉಳಿದ ಹಣವನ್ನು ಮಕ್ಕಳಿಗೆ ನೀಡಿದ್ದಾರೆ. ಇದಾದ ಕೆಲ ತಿಂಗಳ ಬಳಿಕ ತರುಣ್ ತನ್ನ ತಂದೆಯ ಬಳಿ ಮತ್ತೆ ಹಣಕ್ಕಾಗಿ ಪೀಡಿಸಿದ್ದಾನೆ. ಈ ವೇಳೆ ಕೃಷ್ಣಾ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ತರುಣ್, ಅಲ್ಲೇ ಇದ್ದ ಕಬ್ಬಿಣದ ರಾಡ್ ತೆಗೆದುಕೊಂಡು ತಂದೆಯ ತಲೆಗೆ ಹೊಡೆದಿದ್ದಾನೆ. ತಂದೆಯ ಮೇಲೆ ಹಲ್ಲೆ ನಡೆಸಲು ತರುಣ್ ಸಹೋದರಿಯರು ಸಹಕರಿಸಿದ್ದಾರೆ.

ಪರಿಣಾಮ ತೀವ್ರ ರಕ್ತಸ್ರಾವವಾಗಿ ಕೃಷ್ಣ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಘಟನೆಯ ಬಳಿಕ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದು, ಕೂಡಲೇ ಕೃಷ್ಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅವರು ಅದಾಗಲೇ ಮೃತಪಟ್ಟಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *