ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ನೀಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ಹುಸ್ಕೂರು ಗ್ರಾಮದ ಯುವಕ ರಾಜೇಶ್‍ಗೆ ನಡೆಯಲು ಹಾಗೂ ಕೂರಲು ಆಗದಂತೆ ಪೊಲೀಸರು ಹೊಡೆದು ಕಳಿಸಿದ್ದಾರೆ. ಗುರುವಾರ ಹುಸ್ಕೂರು ಗ್ರಾಮದಲ್ಲಿ ರಾಜೇಶ್‍ಗೆ ಮತ್ತೊಂದು ಯುವಕರ ತಂಡ ಬಿಕ್ಲ ಎಂದು ಗೇಲಿ ಮಾಡಿದ್ದಾರೆ. ಈ ವಿಷಯವಾಗಿ ರಾಜೇಶ್ ಹಾಗೂ ಕೆಲ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ. ಆದರೆ ಎಲೆಕ್ಟ್ರಾನಿಕ್ ಸಿಟಿ ಸರ್ಕಲ್ ಇನ್ಸ್ ಪೆಕ್ಟರ್ ಆದ ಮಲ್ಲೆಶ್ ಹಾಗೂ ಪಿ.ಸಿ ಚಂದ್ರಶೇಖರ್ ಮಾತ್ರ ರಾಜೇಶ್‍ನನ್ನು ಕರೆದುಕೊಂಡು ಹೋಗಿ ರಾತ್ರಿಯೆಲ್ಲಾ ಹೊಡೆದು ಆತನನ್ನು ನಡೆಯಲು ಹಾಗೂ ಕೂರಲು ಆಗದ ಸ್ಥಿತಿಗೆ ತಂದಿದ್ದಾರೆ.
ಮಾನಸಿಕವಾಗಿ ಕುಂದುಹೋಗಿರುವ ರಾಜೇಶ್ ಮನೆಯಿಂದ ಹೊರಬರಲು ಹೆದರುತ್ತಿದ್ದಾನೆ. ವಿನಾಕಾರಣ ಮಗನ ಮೇಲೆ ಹಲ್ಲೆ ನಡೆಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಮಲ್ಲೇಶ್ ವಿರುದ್ಧ ಪೋಷಕರು ಆಕ್ರೋಶಗೊಂಡಿದ್ದಾರೆ. ಹುಡುಗರ ಗಲಾಟೆಯಾದರೆ ಮಾತಿನಲ್ಲಿ ಬಗೆಹರಿಸಬಹುದಿತ್ತು, ಆದರೆ ವಿನಾಕಾರಣ ನಮ್ಮ ಮಗನ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ಡಿಸಿಪಿಗೆ ದೂರು ಕೊಡುತ್ತೇವೆ ಎಂದಿದ್ದಾರೆ.