ಅಂಗಡಿಗೆ ಬಂದ ಬಾಲಕಿ ಮೇಲೆ ರೇಪ್- ಅಳ್ತಿದ್ದಂತೆ ಎಸ್ಕೇಪ್ ಆದ

Public TV
1 Min Read

ಹೈದರಾಬಾದ್: 19 ವರ್ಷದ ಯುವಕನೊಬ್ಬ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಇದೀಗ ಪೊಲೀಸರ ಅತಿಥಿಯಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಅತ್ಯಾಚಾರ ಸಂಬಂಧ ಬಾಲಕಿಯ ಪೋಷಕರು ನೀಡಿದ ದೂರಿನಂತೆ ಆರೋಪಿಯನ್ನು ಪೊರಂಡ್ಲಾ ಗ್ರಾಮದಿಂದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಾಲಕಿಯ ಪೋಷಕರು ದಿನಗೂಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಘಟನೆ ನಡೆದ ಸಂದರ್ಭದಲ್ಲಿ ಅವರು ಮನೆಯಲ್ಲಿರಲಿಲ್ಲ. ಇತ್ತ ಆರೋಪಿ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು.

ಬಂಧನದ ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿದಾಗ, ಆತ ಬಾಲಕಿ ಮೇಲೆ ರೇಪ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ನಾನು ಅಂಗಡಿಯಲ್ಲಿ ಒಬ್ಬನೇ ಇದ್ದೆ. ಈ ವೇಳೆ ಬಾಲಕಿ ಅಂಗಡಿಗೆ ಚಾಕ್ಲೇಟ್ ತೆಗೆದುಕೊಳ್ಳಲೆಂದು ಬಂದಳು. ಆಕೆಯ ಸಹೋದರಿ ಸಮೀಪದಲ್ಲಿಯೇ ಆಟವಾಡುತ್ತಿದ್ದಳು. ಹೀಗಾಗಿ ಆಕೆಗೆ ಗೊತ್ತಾಗದಂತೆ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿರುವುದಾಗಿ ಹೇಳಿದ್ದಾನೆ. ಅತ್ಯಾಚಾರದ ಬಳಿಕ ಬಾಲಕಿ ಜೋರಾಗಿ ಅಳುತ್ತಿದ್ದಳು. ಇದರಿಂದ ಗಾಬರಿಗೊಂಡು ಸ್ಥಳದಿಂದ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಡಿ. ವೆಂಕಣ್ಣ ನಾಯ್ಕ್ ತಿಳಿಸಿದ್ದಾರೆ.

ಇತ್ತ ತನ್ನ ಪೋಷಕರು ಮನೆಗೆ ಬಂದ ಬಳಿಕ ಬಾಲಕಿ ನೆರೆಮನೆಯಾತನ ಕೃತವನ್ನು ವಿವರಿಸಿದ್ದಾಳೆ. ಕೂಡಲೇ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *