ಉಡುಪಿ: ಹಿಟ್ & ರನ್‌ಗೆ (Hit And Run Case) ಯುವಕ ಬಲಿಯಾದ ಘಟನೆ ಕಾಪುವಿನಲ್ಲಿ (Kapu) ನಡೆದಿದೆ. ಯುವಕನ ಮೃತದೇಹದ ಮೇಲೆ ಬೇರೆ ವಾಹನಗಳು ಹರಿದಿರುವ ಸಾಧ್ಯತೆ ಇದ್ದು, ದೇಹ ಛಿದ್ರ ಛಿದ್ರವಾಗಿದೆ.
ಮೃತನನ್ನು ಉಡುಪಿಯ (Udupi) ಸಂತೆಕಟ್ಟೆ ಕಲ್ಯಾಣಪುರದ ನಿವಾಸಿ ಅನೂಶ್ ಭಂಡಾರಿ ( 21) ಎಂದು ಗುರುತಿಸಲಾಗಿದೆ. ತಡರಾತ್ರಿ ಈ ಅಪಘಾತ ನಡೆದಿದೆ. ಸ್ಕೂಟಿಯಲ್ಲಿ ಬರುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಅಪಘಾತದ (Accident) ನಂತರ ಬೇರೆ ವಾಹನಗಳು ಮೃತದೇಹದ ಮೇಲೆ ಹರಿದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಗಾಜಿಯಾಬಾದ್ ಎನ್‌ಕೌಂಟರ್ – ಕಳ್ಳನ ಕಾಲುಮುರಿದು ಬಂಧಿಸಿದ ಮಹಿಳಾ ಪೊಲೀಸರ ತಂಡ
ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಅನೂಶ್ ಆರು ತಿಂಗಳ ಹಿಂದೆ ಉಡುಪಿಗೆ ಬಂದು, ಮಂಗಳೂರಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ವೇಷದಲ್ಲಿ ಬಂದು ಶ್ರೀಗಂಧಕ್ಕೆ ಕೊಡಲಿ – 33 ತುಂಡುಗಳು ವಶ, ಆರೋಪಿ ಅರೆಸ್ಟ್