ಚಿಕ್ಕಮಗಳೂರು: ಸ್ನೇಹಿತನ ಮದುವೆಗೆ ಬಂದಿದ್ದ ಯುವಕನೊಬ್ಬ ಭದ್ರಾ ನದಿಯಲ್ಲಿ (Bhadra River) ಮುಳುಗಿ ಸಾವನ್ನಪ್ಪಿದ ಘಟನೆ ಎನ್.ಆರ್.ಪುರ (NR Pura) ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಗದಗ (Gadag) ಮೂಲದ ಅಭಿಷೇಕ್ (27) ಎಂದು ಗುರುತಿಸಲಾಗಿದೆ. ಬನ್ನೂರು ಸಮೀಪದ ಭದ್ರಾ ರೆಸಾರ್ಟ್‌ನಲ್ಲಿ ಆತ ತಂಗಿದ್ದ. ಏ.5ರ ಸಂಜೆ ಭದ್ರಾ ನದಿಯಲ್ಲಿ ಆತ ನಾಪತ್ತೆಯಾಗಿದ್ದ. ಬಳಿಕ ಬಾಳೆಹೊನ್ನೂರು ಪೊಲೀಸರು ಹಾಗೂ ಸ್ಥಳಿಯರು ಶೋಧ ನಡೆಸಿದ್ದರು. ಭಾನುವಾರ ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇದನ್ನೂ ಓದಿ: ಪತ್ನಿ ಆತ್ಮಹತ್ಯೆ ಸುದ್ದಿ ತಿಳಿದು ಆಘಾತ – ಗಡಿಬಿಡಿಯಲ್ಲಿ ಬರುವಾಗ ಅಪಘಾತದಲ್ಲಿ ಪತಿಯೂ ಸಾವು
ಇಂದು (ಏ.6) ಶೋಧ ನಡೆಸಿದಾಗ ನದಿಯಲ್ಲಿ ಆತನ ಶವ ಪತ್ತೆಯಾಗಿದೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಬರ್ಬರ ಹತ್ಯೆ – ಶವ ಸುಟ್ಟುಹಾಕಿದ ಹಂತಕರು

