ಬೆಂಗಳೂರು: ಬಿಜೆಪಿ ಕಚೇರಿ (BJP Office) ಸುತ್ತಾಮುತ್ತ ಸಿಹಿ ಹಂಚಿಕೆ ಮಾಡಿದ್ದ ಯೂತ್ ಕಾಂಗ್ರೆಸ್ (Youth Congress) ಕಾರ್ಯಕರ್ತರನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald Case) ದೆಹಲಿ ಹೈಕೋರ್ಟ್ನಿಂದ ರಾಹುಲ್ ಗಾಂಧಿ (Rahul Gandhi) ಮತ್ತು ಸೋನಿಯಾ ಗಾಂಧಿಗೆ (Sonia Gandhi) ಬಿಗ್ ರಿಲೀಫ್ ಸಿಕ್ಕಿದ ಹಿನ್ನೆಲೆಯಲ್ಲಿ ಇಂದು ಸಂಜೆ 5 ಗಂಟೆಯ ವೇಳೆಗೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯ ಬಳಿ ಕಾರ್ಯಕರ್ತರು ಸಹಿ ಹಂಚಿ ಸಂಭ್ರಮಿಸಿದ್ದರು. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್ – ಸೋನಿಯಾ, ರಾಹುಲ್ ಗಾಂಧಿಗೆ ರಿಲೀಫ್
ರಾಹುಲ್ ಗಾಂಧಿ ಸೋನಿಯಾಗಾಂಧಿ ಪರವಾಗಿ ವಿಜಯೋತ್ಸವ ಆಚರಿಸಲು 30 ಕ್ಕೂ ಹೆಚ್ಚು ಕಾರ್ಯಕರ್ತರು ಸಿದ್ದತೆ ನಡೆಸಿದ್ದರು. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ವೈಯ್ಯಾಲಿಕಾವಲ್ ಪೊಲೀಸರು ಸಂಭ್ರಮಾಚರಣೆ ಮಾಡಿದ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

