ಹಣ ವಾಪಸ್ ಕೊಡಲ್ಲ ಎಂದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

Public TV
1 Min Read

ಬೆಂಗಳೂರು: ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೇವರಚಿಕ್ಕನಹಳ್ಳಿಯಲ್ಲಿ ನಡೆದಿದೆ.

ಹುಳಿಮಾವಿನ ನಿವಾಸಿ ಪ್ರಶಾಂತ್ ನೇಣಿಗೆ ಶರಣಾದ ಯುವಕ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಶಾಂತ್ ಸ್ವಂತ ದುಡ್ಡು ಖರ್ಚು ಮಾಡಿ ವಿಜಯ್ ಕುಮಾರ್ ಅವರ ಹೊಟೇಲ್ ನಡೆಸುತ್ತಿದ್ದನು.

ಹೊಟೇಲ್‍ಗಾಗಿ ಖರ್ಚು ಮಾಡಿದ್ದ ಹಣವನ್ನು ಪ್ರಶಾಂತ್, ವಿಜಯ್ ಕುಮಾರ್‍ನನ್ನು ಕೇಳಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ವಿಜಯ್ ಕುಮಾರ್ ಹಣವನ್ನು ವಾಪಸ್ ಕೊಡುವುದಿಲ್ಲ ಎಂದು ಹೇಳಿದ್ದಾನೆ. ಇದರಿಂದ ಮನನೊಂದು ಪ್ರಶಾಂತ್ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *