JDS ಮುಖಂಡೆ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ ಕೇಸ್‌ – ಆರೋಪಿ ಎಸ್ಕೇಪ್‌

1 Min Read

– ಕದ್ರಾ ಪೊಲೀಸರಿಂದ ವಿಶೇಷ ತಂಡ ರಚನೆ; ತೀವ್ರ ಶೋಧ

ಕಾರವಾರ: ಯುವತಿಯನ್ನ ಪ್ರೀತಿಸುವಂತೆ ಪೀಡಿಸಿ ಆತ್ಮಹತ್ಯೆಗೆ ಕಾರಣವಾಗಿದ್ದ ಕಾರವಾರದ ಜೆಡಿಎಸ್ ಮುಖಂಡೆ (JDS Leader), ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಚೈತ್ರಾ ಕೊಠಾರಕರ್ ಅವರ ಪುತ್ರ ಚಿರಾಗ್ ಪರಾರಿಯಾಗಿದ್ದಾನೆ.

ಕದ್ರಾದ (Khadra) ಕೆಪಿಸಿ ಕಾಲೋನಿಯ ಯುವತಿ ರಿಶೇಲ್ ಡಿಸೋಜಾ (20) ಎಂಬ ಯುವತಿಗೆ ಪ್ರೀತಿಸುವಂತೆ ಪೀಡಿಸುತಿದ್ದ ಆಕೆ ಪ್ರೀತಿಯನ್ನು ತಿರಸ್ಕಾರ ಮಾಡಿದ ಹಿನ್ನೆಲೆಯಲ್ಲಿ ಆಕೆಗೆ ಕರೆ ಮಾಡಿ ಕಿರುಕುಳ ನೀಡುತಿದ್ದು ಚಿರಾಗ್ ನಿಂದ ಬೇಸತ್ತು ಶುಕ್ರವಾರ ರಿಶೇಲ್ ಡಿಸೋಜ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದನ್ನೂ ಓದಿ: ಪ್ರೀತಿ ಹೆಸರಲ್ಲಿ JDS ಮುಖಂಡೆ ಪುತ್ರನಿಂದ ಕಿರುಕುಳ – ಯುವತಿ ಆತ್ಮಹತ್ಯೆ

ಇದರ ಬೆನ್ನಲ್ಲೇ ಭಾನುವಾರ ಚಿರಾಗ್ ವಿರುದ್ಧ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾದ ಬೆನ್ನಲ್ಲೇ ಕದ್ರಾ ಪೊಲೀಸರು ಆತನನ್ನು ಬಂಧಿಸಲು ಕಾರವಾರದ ನಂದನಗದ್ದಾ ದಲ್ಲಿ ಇರುವ ಆತನ ನಿವಾಸಕ್ಕೆ ಇಂದು ಪೊಲೀಸರು ತೆರಳಿದ್ದು ಬಂಧನ ಭೀತಿಯಿಂದ ಚಿರಾಗ್ ಪರಾರಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಕದ್ರಾ ಪೊಲೀಸರು ವಿಶೇಷ ತಂಡ ರಚಿಸಿ ಈತನ ಹುಡುಕಾಟ ನಡೆಸುತಿದ್ದಾರೆ. ಇದನ್ನೂ ಓದಿ: ದಾಂಡೇಲಿ ವಕೀಲ ಅಜಿತ್ ನಾಯ್ಕ ಹತ್ಯೆ ಕೇಸ್;‌ ಆರೋಪಿ ದೋಷಿ ಅಂತ ಕೋರ್ಟ್‌ ತೀರ್ಪು

Share This Article