ಕಾರ್ಕಳದ ಯುವತಿ ಅತ್ಯಾಚಾರ ಕೇಸ್‌ – ಪ್ರಮುಖ ಆರೋಪಿ ಅಲ್ತಾಫ್‌ಗೆ ಜಾಮೀನು ಮಂಜೂರು

Public TV
1 Min Read

ಉಡುಪಿ: ಕಾರ್ಕಳದ ಯುವತಿ ಅತ್ಯಾಚಾರ (Karkala Rape Case) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಲ್ತಾಫ್‌ಗೆ (Althaf) ಜಾಮೀನು ಮಂಜೂರಾಗಿದೆ.

ಉಡುಪಿ (Udupi) ಜಿಲ್ಲಾ ಹೆಚ್ಚುವರಿ ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಿದೆ. ಆಗಸ್ಟ್ 24 ರಂದು ಅತ್ಯಾಚಾರ ಪ್ರಕರಣ ನಡೆದಿತ್ತು. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಕಾರ್ಕಳ ರೇಪ್‌ ಕೇಸ್ ತನಿಖೆ ಚುರುಕು – ಮಾದಕ ವಸ್ತುಗಳ ಜಾಲದ ಬೆನ್ನು ಬಿದ್ದ ಖಾಕಿ

ಗ್ಯಾಂಗ್ ರೇಪ್ ಪ್ರಕರಣ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದವು. ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಮಾಡಿದ್ದ ಆರೋಪ ಕೇಳಿಬಂದಿತ್ತು. ಪ್ರಕರಣದ ಮೂವರು ಆರೋಪಿಗಳಿಗೂ ಜಾಮೀನು ಮಂಜೂರು ಮಾಡಲಾಗಿದೆ.

ಪ್ರಕರಣ ಏನು?
ಸಂತ್ರಸ್ತ ಯುವತಿಗೆ ಅಲ್ತಾಫ್‌ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ. ನಂತರ ಯುವತಿಯನ್ನು ಪುಸಲಾಯಿಸಿ ಆಕೆಯ ಕೆಲಸದ ಸ್ಥಳದಿಂದ ಕಾರಿನಲ್ಲಿ ಕುಕ್ಕುಂದೂರು ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ತನ್ನ ಸಹಚರ ರಿಚರ್ಡ್‌ ಕಾರ್ಡೋಜಾಗೆ ಹೇಳಿ ಮದ್ಯದ ಬಾಟಲಿಗಳನ್ನು ತರಿಸಿಕೊಂಡು, ಅದರಲ್ಲಿ ಮಾದಕ ದ್ರವ್ಯ ಬೆರೆಸಿ ಯುವತಿಗೆ ಬಲವಂತವಾಗಿ ಕುಡಿಸಿದ್ದಾರೆ. ಬಳಿಕ ಲೈಂಗಿಕ ದೌರ್ಜನ್ಯ ಎಸಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಕಾರ್ಕಳ ಅತ್ಯಾಚಾರ ಪ್ರಕರಣ- ಆರೋಪಿಗಳು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ

Share This Article