Bengaluru | ತಡರಾತ್ರಿ ಮೂವರು ಪುಂಡರಿಂದ ಯುವತಿಗೆ ಕಿರುಕುಳ

1 Min Read

ಬೆಂಗಳೂರು: ತಡರಾತ್ರಿ ಮೂವರು ಪುಂಡರು ಯುವತಿಗೆ ಕಿರುಕುಳ (Harassment) ನೀಡಿರುವ ಘಟನೆ ಬೆಂಗಳೂರಿನ (Bengaluru) ಬಿಟಿಎಂ ಲೇಔಟ್‌ನಲ್ಲಿ (BTM Layout) ನಡೆದಿದೆ.

ಸ್ಕೂಟಿಯಲ್ಲಿ ಹೆಲ್ಮೆಟ್ ಧರಿಸಿ ಹೋಗುತ್ತಿದ್ದ ಯುವತಿಗೆ ಮತ್ತೊಂದು ಸ್ಕೂಟಿಯಲ್ಲಿ ಬಂದ ಮೂವರು ಯುವಕರು ಸುಮಾರು 2 ಕಿಲೋ ಮೀಟರ್ ರಸ್ತೆಯುದ್ದಕ್ಕೂ ಕಿರುಕುಳ ನೀಡಿದ್ದಾರೆ. ಡಿ.25ರಂದು ರಾತ್ರಿ 12 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಇದನ್ನೂ ಓದಿ: ನವವಿವಾಹಿತೆ ಆತ್ಮಹತ್ಯೆ ಕೇಸ್‌ – ಈಗ ಪತಿಯೂ ಸೂಸೈಡ್‌, ಅತ್ತೆ ಗಂಭೀರ

ಹೆಲ್ಮೆಟ್ ಕೂಡ ಧರಿಸದೇ ಅಡ್ಡಾದಿಡ್ಡಿ ಚಾಲನೆ ಮಾಡಿದ ಪುಂಡರು ಬೇಕು ಅಂತಲೇ ಯುವತಿಯ ಸ್ಕೂಟಿಯ ಮುಂದೆ ಹೋಗಿ ಅಡ್ಡಾದಿಡ್ಡಿಯಾಗಿ ಸ್ಕೂಟಿ ಚಾಲನೆ ಮಾಡಿದ್ದಾರೆ. ಅಲ್ಲದೇ 2 ಕಿ.ಮೀ ಯುವತಿಯನ್ನು ಫಾಲೋ ಮಾಡಿದ್ದಾರೆ. ಇದೇ ವೇಳೆ ಹಿಂಬದಿ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಯುವತಿಗೆ ಕಿರುಕುಳ ನೀಡುತ್ತಿರುವ ವೀಡಿಯೋ ಸೆರೆ ಹಿಡಿದು ಎಕ್ಸ್ನಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ಸದ್ಯ ಸುದ್ದುಗುಂಟೆ ಪಾಳ್ಯ ಪೊಲೀಸರು ಈ ವೀಡಿಯೋಗೆ ಎಕ್ಸ್ನಲ್ಲಿ ಉತ್ತರಿಸಿದ್ದಾರೆ. ಕಿರುಕುಳ ನೀಡಿದ ಪುಂಡರ ಬೈಕ್ ನಂಬರ್ ಪತ್ತೆ ಮಾಡಿದ್ದು, ಮೂವರನ್ನು ವಿಚಾರಣೆ ಮಾಡೋದಾಗಿ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಕುಡಿದು ಚಾಲನೆ – ಬೆಂಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಸೀಬರ್ಡ್‌ ಬಸ್‌ ಚಾಲಕ ವಶಕ್ಕೆ

Share This Article