ಪ್ರಿಯಕರನ ಭೇಟಿಯಾಗಲು ಗ್ರಾಮದ ವಿದ್ಯುತ್ ಅನ್ನೇ ಕಡಿತಗೊಳಿಸ್ತಿದ್ದ ಯುವತಿ

By
2 Min Read

– ಸಮಸ್ಯೆ ಬಗೆಹರಿಸಲು ಗ್ರಾಮಸ್ಥರಿಂದ ಪ್ರೇಮಿಗಳ ವಿವಾಹ

ಪಾಟ್ನ: ಪ್ರಿಯಕರನನ್ನು (Lover) ಭೇಟಿ ಮಾಡುವ ಸಲುವಾಗಿ ಯುವತಿಯೊಬ್ಬಳು ಪದೇ ಪದೇ ಗ್ರಾಮದ ವಿದ್ಯುತ್ (Electricity) ಸಂಪರ್ಕವನ್ನು ಕಡಿತಗೊಳಿಸುತ್ತಿದ್ದ ಘಟನೆ ಬಿಹಾರದಲ್ಲಿ (Bihar) ನಡೆದಿದ್ದು, ಕೊನೆಗೂ ಗ್ರಾಮಸ್ಥರ ಕೈಯಲ್ಲಿ ಜೋಡಿಗಳಿಬ್ಬರು ಸಿಕ್ಕಿಬಿದ್ದಿದ್ದಾರೆ.

ಬಿಹಾರದ ಬೆಟ್ಟಿಯಾ ಯುವತಿ ಪ್ರೀತಿ ಕುಮಾರಿ ಎಂಬಾಕೆ ಪಕ್ಕದ ಗ್ರಾಮದ ರಾಜ್‌ಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದು, ಆತನನ್ನು ಭೇಟಿ ಮಾಡುವ ಸಲುವಾಗಿ ಆಗಾಗ ಗ್ರಾಮದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದಳು. ಪದೇ ಪದೇ ವಿದ್ಯುತ್ ಕಡಿತವಾಗುತ್ತಿದ್ದರಿಂದ ಗ್ರಾಮಸ್ಥರು ಕಂಗಾಲಾಗಿದ್ದರು. ಪ್ರೀತಿ ಪ್ರತಿದಿನ ರಾತ್ರಿ ವಿದ್ಯುತ್ ಕಡಿತಗೊಳಿಸಿ ತನ್ನ ಪ್ರೇಮಿಯನ್ನು ಭೇಟಿಯಾಗುತ್ತಿದ್ದಳು. ವಿದ್ಯುತ್ ಕಡಿತದಿಂದ ಗ್ರಾಮದಲ್ಲಿ ಕಳ್ಳತನದ ವರದಿಗಳು ಜಾಸ್ತಿಯಾಗುತ್ತಿತ್ತು. ಇದನ್ನೂ ಓದಿ: ಆನ್‍ಲೈನ್ ಗೇಮ್‍ನಲ್ಲಿ 5 ಕೋಟಿ ಗೆದ್ದು, 58 ಕೋಟಿ ಕಳೆದುಕೊಂಡ ಉದ್ಯಮಿ!

ಗ್ರಾಮದಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತಿದ್ದರಿಂದ ಗ್ರಾಮಸ್ಥರು ವಿದ್ಯುತ್ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರು. ಇದರಿಂದ ಯಾವುದೇ ಪ್ರಯೋಜನವಾಗದ ಕಾರಣ ವಿದ್ಯುತ್ ಕಡಿತದ ಹಿಂದಿರುವ ಕಾರಣವನ್ನು ಕಂಡುಹಿಡಿಯಲು ಗ್ರಾಮಸ್ಥರು ನಿರ್ಧರಿಸಿದ್ದರು. ಮುಂದಿನ ಬಾರಿ ಕರೆಂಟ್ ಕಟ್ ಆದ ಸಂದರ್ಭ ಈ ಪ್ರೇಮಿಗಳು ಗ್ರಾಮಸ್ಥರ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ವಿದ್ಯುತ್ ಕಡಿತದ ಹಿಂದಿರುವ ಸತ್ಯ ಬೆಳಕಿಗೆ ಬಂದ ಬಳಿಕ ಗ್ರಾಮಸ್ಥರು ಯುವಕನಿಗೆ ಥಳಿಸಿದ್ದಾರೆ. ಘಟನೆಯ ನಂತರ ಯುವಕ ತನ್ನ ಗ್ಯಾಂಗ್ ಅನ್ನು ಕರೆಸಿ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ವ್ಯಕ್ತಿಯ ಮುಖ, ದೇಹಕ್ಕೆ ಮಲ ಮೆತ್ತಿಸಿ ವಿಕೃತಿ ಮೆರೆದ!

ಇದೀಗ ಗ್ರಾಮಸ್ಥರು ರಾಜ್‌ಕುಮಾರ್‌ಗೆ ದೊಣ್ಣೆಯಿಂದ ಹೊಡೆಯುವುದು ಮತ್ತು ಯುವತಿ ಆತನನ್ನು ರಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗಿದೆ. ಬಳಿಕ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಎರಡೂ ಗ್ರಾಮದ ಜನರು ಮುತುವರ್ಜಿ ವಹಿಸಿ ರಾಜ್‌ಕುಮಾರ್‌ಗೆ ಪ್ರೀತಿಯನ್ನು ಮದುವೆಯಾಗುವಂತೆ ಸೂಚಿಸಿದ್ದಾರೆ. ಅದರ ಪ್ರಕಾರ ಇವರಿಬ್ಬರ ಮದುವೆ (Marriage) ಸ್ಥಳೀಯ ದೇವಸ್ಥಾನದಲ್ಲಿ (Temple) ಅದ್ಧೂರಿಯಾಗಿ ನೆರವೇರಿದೆ. ಇದನ್ನೂ ಓದಿ: ನಾಲ್ಕು ತಿಂಗಳ ಮಗುವಿಗೆ ಲೈಂಗಿಕ ಕಿರುಕುಳ – ಆರೋಪಿ ಬಂಧನ

Web Stories

Share This Article
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್