ಬೆಂಗಳೂರಲ್ಲಿ ಸೋಂಕಿಗೆ ತುತ್ತಾದವರಲ್ಲಿ ಯುವಕರದ್ದೇ ಸಿಂಹ ಪಾಲು!

Public TV
1 Min Read

ಬೆಂಗಳೂರು: ಬೆಂಗಳೂರಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಈಗಾಗಗಲೇ 3ನೇ ಅಲೆ ಪ್ರಾರಂಭವಾಗುತ್ತಿದೆ ಎಂಬ ಭೀತಿಯಲ್ಲಿ ಜನರಿದ್ದಾರೆ. ಈ ಸಲ ಕೊರೊನಾ ಸೋಂಕಿಗೆ ಯುವ ಜನಾಂಗ ಹೆಚ್ಚು ತುತ್ತಾಗುತ್ತಿರುವ ಆಘಾತಕಾರಿ ವಿಷಯ ಹೊರಬಂದಿದೆ.

ಎರಡನೇ ಅಲೆ ವೇಳೆಯಲ್ಲಿ ಕೊರೊನಾ ಸೋಂಕಿಗೆ ಯುವಕರೇ ಹೆಚ್ಚು ತುತ್ತಾಗಿದ್ದರು. ಕಳೆದ ಬಾರಿಯಂತೆ ಈ ಬಾರಿಯೂ ಯುವಜನತೆ ಹೆಚ್ಚು ಸೋಂಕು ಪತ್ತೆ ಆಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ಬೆಂಗಳೂರು ನಗರದಲ್ಲಿ ಈಗಾಗಲೇ 32 ಸಾವಿರ ಸಕ್ರಿಯ ಕೇಸ್‌ಗಳಿವೆ. ಅದರಲ್ಲಿ 20 ಸಾವಿರ ಸೋಂಕಿತರು ಯುವಜನೆ ಆಗಿದ್ದಾರೆ. ಮೂರನೇ ಅಲೆಯಲ್ಲಿ 20-39 ವರ್ಷದೊಳಗಿನ ಯುವಕರೇ ಹೆಚ್ಚು ಟಾರ್ಗೆಟ್ ಆಗುತ್ತಿದ್ದಾರೆ. ಪ್ರತಿದಿನ ನಗರವೊಂದರಲ್ಲೇ ಸಾವಿರಕ್ಕೂ ಹೆಚ್ಚು ಯುವಕರಲ್ಲಿ ಸೋಂಕು ಉಲ್ಬಣಗೊಳ್ಳುತ್ತಿದೆ. ಕಳೆದ ಐದು ದಿನದಲ್ಲಿ ಬರೊಬ್ಬರಿ 8 ಸಾವಿರ ಯುವಕರಲ್ಲಿ ಸೋಂಕು ಪತ್ತೆಯಾಗಿದೆ.

ಸೋಂಕಿಗೆ ಕಾರಣವೇನು?: ಬೇರೆ ವಯೋಮಾನದವರಿಗಿಂತ ಯುವ ಸಮುದಾಯ ಸಮಾಜದಲ್ಲಿ ಹೆಚ್ಚು ಸಕ್ರಿಯವಾಗಿರುವುದು ಪ್ರಮುಖ ಕಾರಣವಾಗಿದೆ. ಹೊರಗಡೆ ಹೋಗಿ ದುಡಿಯುತ್ತಿರುವವರಲ್ಲಿ ಯುವ ಸಮೂದಾಯದ ಸಂಖ್ಯೆ ಅಧಿಕವಾಗಿದೆ. ಇದರಿಂದಾಗಿ ಅವರು ಇತರರ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚಿರುವುದರಿಂದ ಯುವ ಜನಾಂಗದಲ್ಲಿ ಕೊರೊನಾ ಹೆಚ್ಚು ಕಾಣಿಸಿಕೊಳ್ಳುತ್ತಿದೆ.

ಮತ್ತೊಂದು ಪ್ರಮುಖ ಕಾರಣವೆಂದರೆ ಇತ್ತೀಚಿನ ದಿನಗಳಲ್ಲಿ ಕೊರೊನಾವನ್ನು ಎಲ್ಲರೂ ನಿರ್ಲಕ್ಷಿಸುತ್ತಿದ್ದಾರೆ. ಅದರಲ್ಲೂ ಯುವ ಜನತೆಯಲ್ಲಿ ಸೋಂಕಿನ ಬಗ್ಗೆ ಹೆಚ್ಚುತ್ತಿರುವ ನಿರ್ಲಕ್ಷ್ಯದಿಂದ ಉಲ್ಬಣಗೊಂಡಿದೆ. ಇದನ್ನೂ ಓದಿ: ಇಂದಿನಿಂದ ಬೂಸ್ಟರ್ ಡೋಸ್ – ಯಾರು ಪಡೆಯಬಹುದು? ಅರ್ಹತೆ ಏನು?

ಯುವಜನಾಂಗದಲ್ಲಿ ಗುಣಲಕ್ಷಣ ಇಲ್ಲದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಇದರಿಂದಾಗಿ ಯುವಕರ ಮನೆಯ ಸದ್ಯಸ್ಯರಿಗೆ ಹಾಗೂ ಇನ್ನಿತರರಿಗೆ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಕೋವಿಡ್ ಟೆಸ್ಟಿಂಗ್‌ಗೆ ಯುವ ಜನಾಂಗದವರೇ ಹೆಚ್ಚಾಗಿ ಒಳಗಾಗುತ್ತಿದ್ದಾರೆ. ಇದನ್ನೂ ಓದಿ: ನಾಯಕತ್ವಕ್ಕಾಗಿ ಡಿಕೆಶಿಯಿಂದ ಪಾದಯಾತ್ರೆ ಡ್ರಾಮಾ: ಕಟೀಲ್

Share This Article
Leave a Comment

Leave a Reply

Your email address will not be published. Required fields are marked *