ಬಳ್ಳಾರಿ: ಯುವಕನೊಬ್ಬ ತನ್ನ ತಂದೆ, ತಾಯಿ ಹಾಗೂ ಸಹೋದರಿಯನ್ನು ಕೊಂದು ಮನೆಯ ಒಳಗೆ ಹೂತು ಹಾಕಿರುವ ಪ್ರಕರಣ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದಿದೆ.
ಅಕ್ಷಯ್ ಕುಮಾರ್ ಕೊಲೆ ಆರೋಪಿಯಾಗಿದ್ದು, ಈತ ಜ.27 ರಂದು ತನ್ನ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮಿ ಹಾಗೂ ಸಹೋದರಿ ಅಮೃತಾಳನ್ನ ಕೊಲೆ ಮಾಡಿ ಬೆಂಗಳೂರಿಗೆ ಎಸ್ಕೇಪ್ ಆಗಿದ್ದ. ಬಳಿಕ ಬೆಂಗಳೂರಿನ ತಿಲಕ ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಕೊಡಲು ಮುಂದಾಗಿದ್ದ. ಇದನ್ನೂ ಓದಿ: ಶಿಡ್ಲಘಟ್ಟ ಕೇಸ್ – ಆರೋಪಿ ರಾಜೀವ್ ಗೌಡಗೆ ಜಾಮೀನು
ದೂರು ಕೊಡಲು ಹೋದಾಗ, ಆತನ ನಡವಳಿಕೆ ಕಂಡು ಪೊಲೀಸರಿಗೆ ಅನುಮಾನ ಬಂದಿತ್ತು. ಅನುಮಾನಗೊಂಡ ಪೊಲೀಸರು ವಿಚಾರಣೆ ಮಾಡಿದಾಗ ತಾನೇ ಕೊಲೆ ಮಾಡಿರೋದಾಗಿ ಬಾಯ್ಬಿಟ್ಟಿದ್ದಾನೆ. ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಆರೋಪಿಯನ್ನ ಬೆಂಗಳೂರಿನಿಂದ ಕರೆತರಲಾಗುತ್ತಿದೆ. ಆರೋಪಿ ಅಕ್ಷಯ್ ಕುಮಾರ್ ಕರೆ ತಂದ ಮೇಲೆ ಸ್ಥಳ ಮಹಜರು ಮಾಡಲಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ವಿಜಯನಗರ ಎಸ್ಪಿ ಜಾಹ್ನವಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಅಕ್ಷಯ್ ಕುಮಾರ್ ಮೂಲತಃ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಗ್ರಾಮದವನು ಎನ್ನಲಾಗಿದೆ. ಕೆಲಸ ಮಾಡುವ ಕಾರಣಕ್ಕೆ ಅಕ್ಷಯ್ ಕುಮಾರ್ ತಂದೆ ಕುಟುಂಬ ಸಮೇತ ಕೊಟ್ಟೂರಿಗೆ ಬಂದಿದ್ದರು. ಹಲವು ವರ್ಷಗಳಿಂದ ಕೊಟ್ಟೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು. ಇದೀಗ ತಂದೆ, ತಾಯಿ ಹಾಗೂ ಸಹೋದರಿಯನ್ನ ಕೊಲೆ ಮಾಡಿ ಅದೇ ಬಾಡಿಗೆ ಮನೆಯಲ್ಲಿ ಹೂತು ಹಾಕಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಐಟಿ ದಾಳಿಗೆ ಹೆದರಿ ಶೂಟ್ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

