ಮಂಗಳೂರು: ಯುವಕನೊಬ್ಬ ಹೃದಯಾಘಾತಕ್ಕೆ (Heart Attack) ಬಲಿಯಾಗಿರುವುದು ಬಂಟ್ವಾಳದ (Bantwal) ಬಿ.ಸಿರೋಡ್‍ನಲ್ಲಿ ನಡೆದಿದೆ.
ರಾಜಸ್ತಾನ ಮೂಲದ ನಟವರ್ ಸಿಂಗ್ (27) ಸಾವನ್ನಪ್ಪಿದ ಯುವಕ. ಈತ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಇಂದು (ಶುಕ್ರವಾರ) ಬೆಳಗ್ಗೆ ಈತನಿಗೆ ತಲೆ ಸುತ್ತು ಬಂದಿದೆ. ಇದರಿಂದ ಆತನನ್ನು ಆಸ್ಪತ್ರೆಗೆ ಸಾಗಿಸಲು ಕೆಲವರು ಮುಂದಾಗಿದ್ದಾರೆ. ಮಾರ್ಗ ಮಧ್ಯೆಯೇ ಆತನಿಗೆ ಹೃದಯಾಘಾತವಾಗಿ, ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: Heart Attack | ಮೈಸೂರು, ಕೊಡಗಿನಲ್ಲಿ ಹೃದಯಾಘಾತಕ್ಕೆ ಮತ್ತೆರಡು ಬಲಿ
ನಟವರ್ ಸಿಂಗ್ ಕಳೆದ ಆರು ತಿಂಗಳ ಹಿಂದೆ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Heart Attack | ಹಾಸನ, ಶಿವಮೊಗ್ಗದಲ್ಲಿ ತಲಾ ಒಬ್ಬರು ರೈತರು ಹೃದಯಾಘಾತಕ್ಕೆ ಬಲಿ