ಶಿವಮೊಗ್ಗದಲ್ಲಿ ಅವೈಜ್ಞಾನಿಕ ಹಂಪ್‌ಗೆ ಯುವಕ ಬಲಿ

1 Min Read

ಶಿವಮೊಗ್ಗ: ಪಾಲಿಕೆ ನಿರ್ಮಿಸಿದ್ದ ಅವೈಜ್ಞಾನಿಕ ಹಂಪ್‌ಗೆ ಯುವಕ ಬಲಿಯಾದ ಘಟನೆ ಶಿವಮೊಗ್ಗದ (Shivamogga) ಎಲ್‌ಬಿಎಸ್‌ ನಗರದಲ್ಲಿ ನಡೆದಿದೆ.

ಮೃತನನ್ನು ನಗರದ ಉಲ್ಲಾ (35) ಎಂದು ಗುರುತಿಸಲಾಗಿದೆ. ಎಲ್‌ಬಿಎಸ್ ನಗರದ ಫ್ಲೈಓವರ್‌ ಬಳಿ ಹಂಪ್ ಕಾಣದೇ ಉಲ್ಲಾ ಅವರು ಬೈಕ್‌ನಿಂದ (Bike) ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿಸಿತ್ತು. ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹಂಪ್ ಕಾಣದೇ ಬೈಕ್‌ನಿಂದ ಬಿದ್ದಿರುವ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬಿಎಂಟಿಸಿ ಬಸ್ ಡಿಕ್ಕಿ – ಬೈಕ್ ಸವಾರ ಸಾವು

ಮೃತ ಉಲ್ಲಾ ಅವರು ಶಿವಮೊಗ್ಗದ ಸಂಗೀತಾ ಮೊಬೈಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಶಿವರಾತ್ರಿ ಜಾಗರಣೆಗೆ ಹೋಗಿದ್ದವರ ಮನೆಗೆ ಕನ್ನ – 154 ಗ್ರಾಂ ಚಿನ್ನ, 270 ಗ್ರಾಂ ಬೆಳ್ಳಿ ಕಳ್ಳತನ

Share This Article